ಭಾರತ‑ಫ್ರಾನ್ಸ್ ಸಂಬಂಧ ಮತ್ತಷ್ಟು ಎತ್ತರಕ್ಕೆ

ಫ್ರಾನ್ಸ್ ರಾಷ್ಟ್ರಪತಿ ಇಮಾನ್ಯುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಸುವುದರಲ್ಲಿ ಮತ್ತು ವ್ಯೂಹಾತ್ಮಕ ಹಂತದಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ. ಭಾರತ ಬೆಳೆಯುತ್ತಿರುವ ಜಾಗತಿಕ ಶಕ್ತಿ ಎಂಬುದನ್ನು ಫ್ರಾನ್ಸ್ ಒಪ್ಪಿಕೊಳ್ಳುತ್ತದೆ. ಇದಕ್ಕೆ ಪೂರಕವಾಗಿ ಭಾರತ ಆರ್ಥಿಕ ಗಾತ್ರದಲ್ಲಿ 6ನೇ ಸ್ಥಾನದಲ್ಲಿದ್ದು, 2.45 ಟ್ರಿಲಿಯನ್ ಡಾಲರ್ ನಾಮಿನಲ್ ಜಿಡಿಪಿ ಹೊಂದಿದೆ. ಅಲ್ಲದೆ ಮಾನವ ಅಭಿವೃದ್ಧಿಗೂ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ.
ಭಾರತ ಮತ್ತು ಫ್ರಾನ್ಸ್ ಮೊದಲಿನಿಂದಲೂ ಆತ್ಮೀಯ ಸಂಬಂಧಗಳನ್ನು ಹೊಂದಿವೆ. ಭಾರತ 1974ರಲ್ಲಿ ಮೊದಲ ಪೋಖ್ರಾನ್ ಅಣು ಪರೀಕ್ಷೆ ನಡೆಸಿದ್ದ ವೇಳೆ ಫ್ರಾನ್ಸ್ ದೇಶದ ಅಂದಿನ ರಾಷ್ಟ್ರಪತಿ ವೇಲರಿ ಗಿಸ್ಕಾರ್ಡ್ ಅವರು ಭಾರತದ ನಿರ್ಧಾರವನ್ನು ಪೂರ್ಣವಾಗಿ ಬೆಂಬಲಿಸಿದ್ದರು. 1999ರಲ್ಲಿ ಎರಡನೇ ಪೋಖ್ರಾನ್ ಪರೀಕ್ಷೆ ಬಳಿಕ ಫ್ರಾನ್ಸ್ ಮತ್ತು ಪಾಶ್ಚಿಮಾತ್ಯ ದೇಶಗಳ ಅಭಿಪ್ರಾಯಗಳಲ್ಲಿ ಭಿನ್ನತೆ ಕಂಡುಬಂದಿತ್ತು. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ನಿಲ್ಲುವುದನ್ನು ಈ ದೇಶಗಳು ಬಯಸಿರಲಿಲ್ಲ. ಪೋಖ್ರಾನ್ ಎರಡನೇ ಪರೀಕ್ಷೆ ಬಳಿಕ ಫ್ರಾನ್ಸ್ ಭಾರತದ ಮೇಲೆ ನಿರ್ಬಂಧವನ್ನೂ ಹೇರಲಿಲ್ಲ.  
ಭಾರತ ಮತ್ತು ಫ್ರಾನ್ಸ್ ವೈವಿಧ್ಯಮಯ ಸಂಬಂಧ ಸಾಧಿಸಿವೆ. ಫ್ರಾನ್ಸ್ ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿ ಮಾಡುವುದು, ಮಿಲಿಟರಿ ತಂತ್ರಜ್ಞಾನ, ಭಯೋತ್ಪಾದನೆ ವಿರೋಧಿ ವಿಚಾರದಲ್ಲಿ ಅನುಭವ ಹಂಚಿಕೊಳ್ಳುವುದು, ಪೈರೆಸಿ ನಿಯಂತ್ರಣ, ಮಿಲಿಟರಿ ನಿಗಾ ಇತ್ಯಾದಿ ವಿಷಯಗಳಲ್ಲಿ ಸಹಕಾರ ಸಾಧಿಸಿವೆ. ಸಮುದ್ರ ಕಾರಿಡಾರ್ ಗಳಲ್ಲಿ ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರ, ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ಸೇನಾ ನಿಯೋಜನೆಗಳ ಮೇಲೆ ನಿಗಾ ಸೇರಿದಂತೆ ವಿವಿಧ ವಿಷಯಗಳಲ್ಲಿ ನವದೆಹಲಿ ಮತ್ತು ಪ್ಯಾರಿಸ್ ಪರಸ್ಪರ ಏಕರೂಪದ ನಿಲುವನ್ನು ಹಂಚಿಕೊಂಡಿವೆ. ಪರಸ್ಪರ ಆರ್ಥಿಕ ಸಂಬಂಧವೂ ಬಲಿಷ್ಠವಾಗಿದೆ. ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ, ವಿಶ್ವಸಂಸ್ಥೆ ಸುಧಾರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.  
ರಾಷ್ಟ್ರಪತಿ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ ಅವರು ಎರಡೂ ದೇಶಗಳ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದು, ಭದ್ರತೆ, ಏಷ್ಯಾ ಪೆಸಿಫಿಕ್ ವಲಯದಲ್ಲಿ ಅಂತಾರಾಷ್ಟ್ರೀಯ ಬಂದರು ಪರಿವೀಕ್ಷಣೆ, ಮಿಲಿಟರಿ ಲಾಜಿಸ್ಟಿಕ್ ವ್ಯವಸ್ಥೆಗಳ ಹಂಚಿಕೆ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಸಾಹೆಲ್ ಪ್ರದೇಶದಲ್ಲಿ ಭಯೋತ್ಪಾದನೆಗೆ ಕಡಿವಾಣ ಹಾಕುವ ಬಗ್ಗೆಯೂ ತಮ್ಮ ಉದ್ದೇಶಗಳನ್ನು ಹಂಚಿಕೊಂಡಿದ್ದಾರೆ.  
36 ರಫೆಲ್ ಫೈಟರ್ ಜೆಟ್ ಗಳ ಪೂರೈಕೆ ಕುರಿತ ಒಪ್ಪಂದ ಮತ್ತು ರಫೇಲ್ ಜೆಟ್ ಸಾಮಗ್ರಿಗಳ ಉತ್ಪಾದನೆ, ನಾಗಪುರದಲ್ಲಿ ಭಾರತದ ರಿಲಯನ್ಸ್ ಡಿಫೆನ್ಸ್
ನಿರ್ಮಾಣ ಕುರಿತು ಇಬ್ಬರು ನಾಯಕರ ಮಧ್ಯೆ ಚರ್ಚೆಗಳು ನಡೆದವು. ಇನ್ನಷ್ಟು ಜೆಟ್ ಗಳ ಖರೀದಿ ಬಗ್ಗೆಯೂ ಮಾತುಕತೆಗಳು ನಡೆದವು. ಪ್ರಾಜೆಕ್ಟ್ ‑75 ಸ್ಟೆಲ್ತ್ ಫ್ರಿಗೇಟ್ ಉತ್ಪಾದನೆ ಯೋಜನೆ, ಭಾರತದಲ್ಲಿ ಮೊಲದ ಭಾರಿಗೆ ನಿರ್ಮಾಣವಾಗಿರುವ ಸ್ಕಾರ್ಪೀನ್ ಸಬ್ ಮೆರಿನ್ ಗೆ ಚಾಲನೆ ನೀಡುವುದು, ಪರ್ಯಾಯ ಯುದ್ಧ ವಿಮಾನ ಖರೀದಿ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಎರಡೂ ದೇಶಗಳು ಸುಮಾರು 10 ಬಿಲಿಯನ್ ಯೂರೋ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದುವ ಗುರಿ ಇಟ್ಟುಕೊಂಡಿವೆ. 2017ರ ಜನವರಿಯಿಂದ ಜೂನ್ ವರೆಗೆ ಎರಡೂ ದೇಶಗಳ ನಡುವಿನ ವ್ಯಾಪಾರ ಪ್ರಮಾಣ 6.6 ಬಿಲಿಯನ್ ಯೂರೋ ಆಗಿತ್ತು. 2008ರಲ್ಲಿ ಪರಮಾಣು ಪೂರೈಕೆದಾರರ ದೇಶಗಳು ವಿನಾಯಿತಿ ಯೋಜನೆಯಿಂದ ಭಾರತಕ್ಕೆ ಫ್ರಾನ್ಸ್ ನಿಂದ ಪರಮಾಣು ಇಂಧನ ಸಿಸ್ಟಂಗಳ ಪೂರೈಕೆ ಹೆಚ್ಚಾಗಿದೆ. ಭಾರತದಲ್ಲಿ ಇರುವ ಅವಕಾಶವನ್ನು ಬಳಸಿಕೊಳ್ಳಲು ಫ್ರಾನ್ಸ್ ಇಚ್ಚೆ ಹೊಂದಿದ್ದರೆ, ಭಾರತ ತನ್ನ ಪರಮಾಣು ಇಂಧನ ಆಧರಿತ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಯಸಿದೆ. 
ಫ್ರಾನ್ಸ್ ನ ಹಿಂದಿನ ರಾಷ್ಟ್ರಪತಿ ಫ್ರಾಂಕೋಯಿಸ್ ಹೊಲಾಂಡ್ ಮತ್ತು ಭಾರತದ ಪ್ರಧಾನ ಮಂತ್ರಿಯವರು 121 ದೇಶಗಳ ಅಂತರರಾಷ್ಟ್ರೀಯ ಸೌರ ಅಲೈಯನ್ಸ್ (ISA) ಒಪ್ಪಂದವನ್ನು ಆಧರಿಸಿ ಹವಾಮಾನ ಬದಲಾವಣೆಗೆ ಗಮನಾರ್ಹ ಹೆಜ್ಜೆ ಇಟ್ಟಿದ್ದರು. ಸುಮಾರು 30 ದೇಶಗಳು ISA ಅನ್ನು ಅನುಮೋದಿಸಿವೆ. ಜಾಗತಿಕ ತಾಪಮಾನ ಮತ್ತು ಓಝೋನ್ ಪದರದ ಸವಕಳಿಯನ್ನು ಕಡಿಮೆ ಮಾಡಲು, ಪರ್ಯಾಯ ಸಮರ್ಥನೀಯ ವಿದ್ಯುತ್ ಉತ್ಪಾದನಾ ಪರಿಸರಕ್ಕೆ ಜಗತ್ತನ್ನು ತೆರೆಯಿಸಿಕೊಳ್ಳಲು ಇದು ಉತ್ತಮ ಅವಕಾಶ.  ಅಧ್ಯಕ್ಷ ಮ್ಯಾಕ್ರಾನ್ ಮತ್ತು ಪ್ರಧಾನಿ ಮೋದಿ ಸೇರಿದಂತೆ ಸುಮಾರು ಒಂದು ಡಜನ್ಗಿಂತಲೂ ಹೆಚ್ಚು ವಿಶ್ವ ನಾಯಕರು ISA ಸಂಸ್ಥಾಪನಾ ಸಮ್ಮೇಳನದಲ್ಲಿ ಭಾಗವಹಿಸಿದರು. ಇದು ISA ಉಪಕ್ರಮವನ್ನು ಹೆಚ್ಚಿಸಿದೆ. ಫ್ರೆಂಚ್ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭಾರತದ ಅತಿದೊಡ್ಡ ಸೌರ ಸ್ಥಾವರಕ್ಕೆ ಚಾಲನೆ ನೀಡಿದ್ದಾರೆ.
ಭಯೋತ್ಪಾದಕರಿಗೆ ಸುರಕ್ಷಿತ ಪ್ರದೇಶಗಳಿಗೆ ಕಡಿವಾಣ ಹಾಕುವುದು ಭಯೋತ್ಪಾದಕ ಜಾಲಗಳು ಮತ್ತು ಅವರ ಹಣಕಾಸು ಜಾಲಗಳನ್ನು ಭಂಗಗೊಳಿಸುವ ಮತ್ತು ಭಯೋತ್ಪಾದಕರ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಕ್ಕಾಗಿ ಎರಡೂ ದೇಶಗಳು ಒಗ್ಗೂಡಿ ಕೆಲಸ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಲಾಯಿತು. ಮ್ಯಾಕ್ರಾನ್ ಮತ್ತು ಮೋದಿ ಅವರು ಭಾರತೀಯ ಮತ್ತು ಫ್ರೆಂಚ್ ಭಯೋತ್ಪಾದನಾ ಏಜೆನ್ಸಿಗಳ ನಡುವೆ ಕಾರ್ಯಾಚರಣೆಯ ಸಹಕಾರವನ್ನು ಹೆಚ್ಚಿಸಲು ಒಪ್ಪಿಗೆ ನೀಡಿದರು ಮತ್ತು ತೀವ್ರಗಾಮಿತ್ವವನ್ನು ತಡೆಗಟ್ಟಲು ಸಮ್ಮತಿಸಿದರು. ಯುಎನ್ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕಾಗಿ ಭಾರತಕ್ಕೆ ತನ್ನ ಬೆಂಬಲವನ್ನು ಫ್ರಾನ್ಸ್ ಪುನರುಚ್ಚರಿಸಿತು. ಫ್ರಾನ್ಸ್ ಮತ್ತು ಭಾರತವು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣದ ಕ್ಷೇತ್ರದಲ್ಲಿ ಸಾಮಾನ್ಯ ಕಾಳಜಿ ಮತ್ತು ಉದ್ದೇಶಗಳನ್ನು ಹಂಚಿಕೊಳ್ಳುತ್ತವೆ.  
ಒಟ್ಟಿನಲ್ಲಿ ಫ್ರಾನ್ಸ್ ಅಧ್ಯಕ್ಷರ ಭಾರತ ಭೇಟಿ ಎರಡೂ ದೇಶಗಳ ವ್ಯೂಹಾತ್ಮಕ ಪಾಲುದಾರಿಕೆಗೆ ಹೊಸ ವೇದಿಕೆಯನ್ನು ಕಲ್ಪಿಸಿದೆ. 
ಲೇಖನ : ಗೌತಮ್ ಸೇನ್, ವಿಶ್ಲೇಷಕರು