ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಅಭೂತಪೂರ್ವ ಸಾಧನೆ

ಕಳೆದ ಎರಡು ವಾರಗಳಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ 21 ನೇ ಆವೃತ್ತಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನದಲ್ಲಿ ಮಹಿಳಾಶಕ್ತಿಯ ಪ್ರದರ್ಶನವಾಗಿದೆ. 2010ರ ನ್ಯೂ ಡೆಲ್ಲಿ ಗೇಮ್ಸ್ ನಲ್ಲಿ ಗೆದ್ದ ಪದಕಗಳ ಪಟ್ಟಿ ನೂರರ ಗಡಿ ದಾಟಿತ್ತು ಮತ್ತು 2014ರ ಗ್ಲಾಸ್ಗೋ ಕ್ರೀಡಾಕೂಟದಲ್ಲಿ 64 ಪದಕಗಳು ಲಭಿಸಿದ್ದವು. ಈ ಬಾರಿ ಆಸ್ಟ್ರೇಲಿಯಾದ  ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 26 ಚಿನ್ನದ ಪದಕ, 20 ಬೆಳ್ಳಿ ಮತ್ತು 20 ಕಂಚುಗಳನ್ನು ಗೆದ್ದಿದೆ. ಭಾರತವು ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನಗಳಿಸಿದೆ.

ಮಹಿಳಾ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಪಿ ವಿ ಸಿಂಧು ಅವರನ್ನು 21-18, 23-21 ಸೆಟ್ ಗಳಿಂದ ಸೋಲಿಸಿದರು. ಭಾರತೀಯ ಮಹಿಳಾ ಬಾಕ್ಸಿಂಗ್ ನ ಮೇರಿ ಕೋಮ್, 48 ಕೆಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಮಿರಾಬಾಯ್ ಚಾನು 48 ಕೆಜಿ ಮಹಿಳಾ ವೈಟ್ ಲಿಫ್ಟಿಂಗ್ ವಿಭಾಗದ ಮೊದಲ ದಿನದ ಸ್ಪರ್ಧೆಯಲ್ಲಿ ಆರು ದಾಖಲೆಗಳ ಮುರಿದ ಆರರಲ್ಲಿ ಆರು ಅಂಕಗಳೊಂದಿಗೆ ದಾಖಲೆ ಬರೆದು ಚಿನ್ನ ಗೆದ್ದರು. 53 ಕೆ.ಜಿ ವರ್ಗದಲ್ಲಿ ಮಣಿಪುರದ ಸಂಜಿತಾ ಚಾನು ಅವರೊಂದಿಗೆ ಪೂನಮ್ ಯಾದವ್ ಅವರು 69 ಕೆಜಿ ಸ್ಪರ್ಧೆಯಲ್ಲಿ ಪದಕ ಗೆದ್ದರು.

ಪುರುಷರ 77 ಕೆಜಿ ವಿಭಾಗದಲ್ಲಿ ಸತೀಶ್ ಕುಮಾರ್ ಶಿವಲಿಂಗಂ ಮತ್ತು 85 ಕೆಜಿ ವಿಭಾಗದಲ್ಲಿ ವೆಂಕಟ್ ರಾಹುಲ್ ರಾಗಾಲಾ ಅವರು ಉನ್ನತ ದರ್ಜೆ ಪ್ರದರ್ಶನ ನೀಡಿದರು ಪಿ. ಗುರುರಾಜ ಪುರುಷರ 56 ಕೆಜಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆಯಾಗಿ, ಈ ವಿಭಾಗದಿಂದ ಒಟ್ಟು ಒಂಬತ್ತು ಪದಕಗಳನ್ನು ಭಾರತ ಗೆದ್ದಿತು. ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇದು ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ.

ಇದಾದ ಬಳಿಕ ಶೂಟರ್ಸ್ ಗಳ ನಿರ್ವಹಣೆಯನ್ನು ನಾವಿಲ್ಲಿ ಅಲ್ಲಗಳೆಯುವಂತಿಲ್ಲ. 10 ಮೀಟರ್ ಏರ್ ಪಿಸ್ತೂಲ್ ಪಂದ್ಯಾವಳಿಯಲ್ಲಿ ಮನು ಭಾಸ್ಕರ್ ಚಿನ್ನ ಗೆದ್ದರೆ, ಹೀನಾ ಸಿಂಧು ಅವರು ಬೆಳ್ಳಿ ಪದಕಕ್ಕೆ ಪಾತ್ರರಾದರು. ನಂತರ 25 ಮೀಟರ್ ಶೂಟ್ ಔಟ್ ನಲ್ಲಿ ಹೀನಾ ಭಾಸ್ಕರ್ ಅವರು ಚಿನ್ನವನ್ನು ಸಂಪಾದಿಸಿದರೆ, ವಿಶ್ವ ಚಾಂಪಿಯನ್ ಶಿಪ್ ವಿಜೇತ ಜಿತು ರೈ ಅವರಯ 25 ಮೀಟರ್ ಏರ್ ಪಿಸ್ತೂಲ್ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು. ಮೆಹುಲಿ ಘೋಷ್, ಓಮ್ ಮಿತ್ರಾವಾಲ್, ಅಪೂರ್ವಿ ಚಂಡೇಲ ಮತ್ತು ರಾಜಿವ್ ಕುಮಾರ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಸೈನಾ ನೆಹ್ವಾಲ್ ನೇತೃತ್ವದ ಭಾರತದ ಬ್ಯಾಡ್ಮಿಂಟನ್ ಸ್ಕ್ವಾಡ್ ಮತ್ತು ಮಹಿಳಾ ಟೇಬಲ್ ಟೆನಿಸ್ ತಂಡ ಮೊದಲ ಬಾರಿಗೆ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡವು. ಅದಲ್ಲದೆ 2006ರ ಮಾದರಿಯಲ್ಲಿ ಭಾರತದ ಪುರುಷರ ತಂಡವೂ ಅಭೂತಪೂರ್ವ ಪ್ರದರ್ಶನ ನೀಡಿತು.

ಶ್ರೇಯಸಿ ಸಿಂಗ್ ಅವರು ಮಹಿಳಾ ಡಬಲ್ ಟ್ರಾಪ್ನಲ್ಲಿ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಚಿನ್ನದ ಓಟವು ಎರಡನೆಯ ವಾರದಲ್ಲಿಮುಂದುವರೆಯಿತು. ಓಂ ಮಿಥರ್ವಾಲ್ ಮತ್ತು ಅಂಕುರ್ ಮಿತ್ತಲ್ ಅವರಿಗೆ ಕಂಚಿನ ಪದಕ ಕಾದಿತ್ತು.  ಒಟ್ಟಿನಲ್ಲಿ ಭಾರತದ ಶೂಟರ್ ಗಳು ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿದರು.

 ಆಸ್ಟ್ರೇಲಿಯಾದ ಎಮ್ಮಾ ಕಾಕ್ಸ್ ಅವರಂತೆ ಭಾರತದ ಶ್ರೇಯಸಿ ಅವರು, 96 ಅಂಕ ಗಳಿಸಿದರು. ಓಂ ಪ್ರಕಾಶ್ ಮಿಥರ್ವಾಲ್ ಮತ್ತು ಅಂಕುರ್ ಮಿತ್ತಲ್ ಅವರು 50 ಮೀಟರ್ ಏರ್ಪಿಸ್ತೂಲ್ ಮತ್ತು ಪುರುಷರ ಡಬಲ್ ಟ್ರ್ಯಾಪ್ ಪಂದ್ಯದಲ್ಲಿ ಕಂಚಿನ ಪದಕ ಗೆದ್ದರು.

ಬಾಕ್ಸಿಂಗ್ ರಿಂಗ್ನಲ್ಲಿ, ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ನೇತೃತ್ವದ ಭಾರತೀಯ ತಂಡ ಕೂಡ ಗಮನಾರ್ಹ ಪ್ರದರ್ಶನ ನೀಡಿತು. ಪುರುಷರ ಸ್ಪರ್ಧೆಯಲ್ಲಿ ಎಂಟುಬಾಕ್ಸರ್ ಗಳು ಸ್ಪರ್ಧೆಯಲ್ಲಿ  ಪದಕ ಗೆದ್ದರು. ನ್ಯೂ ಡೆಲ್ಲಿ ಗೇಮ್ಸ್ ನಲ್ಲಿನ ಪ್ರದರ್ಶನಕ್ಕಿಂತಲೂ ಇದು ಉತ್ತಮವಾಗಿತ್ತು.

ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ (74 ಕೆ.ಜಿ) ಚಿನ್ನ ಗೆಲ್ಲುವ ಮೂಲಕ ಒಂಬತ್ತು ಪದಕಗಳು ಕುಸ್ತಿಪಟುಗಳ ಪಾಲಾದವು. ಗ್ಲಾಸ್ಗೋದಲ್ಲಿ ನಡೆದ 2014ರ ಕ್ರೀಡಾಕೂಟದಲ್ಲಿ, ಕುಸ್ತಿ ಪಂದ್ಯಾವಳಿಯಲ್ಲಿ ಭಾರತ ಐದು ಚಿನ್ನದ ಪದಕಗಳು, ಆರು ಬೆಳ್ಳಿಯ ಮತ್ತು ಎರಡು ಕಂಚಿನ ಪದಕವನ್ನು ಗೆದ್ದುಕೊಂಡಿತ್ತು. ಸುಶೀಲ್, ಕಾಮನ್ವೆಲ್ತ್ ಚಾಂಪಿಯನ್ ಶಿಪ್ ಟಾಪರ್ರಾಹುಲ್ ಅವಾರೆ, ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಫೊಗಟ್ ಸಹೋದರಿಯರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವದ ಗಮನಸೆಳೆದಿದ್ದಾರೆ.

ಲೇಖನ : ರಾಹುಲ್  ಬ್ಯಾನರ್ಜಿ, ಹಿರಿಯ ಕ್ರೀಡಾ ಪತ್ರಕರ್ತ