ಐಪಿಎಲ್ ಕ್ರಿಕೆಟ್‌ನಲ್ಲಿ ಜೈಪುರದಲ್ಲಿಂದು ರಾಜಸ್ತಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ವ ಮುಖಾಮುಖಿ.

ಐಪಿಎಲ್ ಪಂದ್ಯಾವಳಿಯಲ್ಲಿಂದು ರಾತ್ರಿ ೮ ಗಂಟೆಗೆ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ತಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ‍್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಎರಡೂ ತಂಡಗಳ ಮುಖಾಮುಖಿಯಲ್ಲಿ ರಾಜಸ್ತಾನ ೯ ಬಾರಿ ಹಾಗೂ ಕೊಲ್ಕತ್ತಾ ತಂಡ ೬ ಬಾರಿ ಗೆಲುವು ಸಾಧಿಸಿವೆ. ಜೈಪುರದಲ್ಲಿ ರಾಜಸ್ತಾನ ತಂಡ ೩ ಬಾರಿ ಹಾಗೂ ಪ್ರವಾಸಿ ತಂಡ ಒಂದು ಬಾರಿ ಗೆಲುವು ಸಾಧಿಸಿದೆ.