ಐಪಿಎಲ್ ಕ್ರಿಕೆಟ್; ಮೊಹಾಲಿಯಲ್ಲಿಂದು ರಾತ್ರಿ ೮ ಗಂಟೆಗೆ ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ಸನ್‌ರೈಸರ್ ಹೈದರಾಬಾದ್ ತಂಡಗಳ ಹಣಾಹಣಿ.

ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್‌ರೈಸರ‍್ಸ್ ಹೈದ್ರಾಬಾದ್ ತಂಡದೊಂದಿಗೆ ಮುಖಾಮುಖಿಯಾಗಲಿದೆ. ಪಂದ್ಯ ರಾತ್ರಿ ೮ ಗಂಟೆಗೆ ಮೊಹಾಲಿಯಲ್ಲಿ ಆರಂಭವಾಗಲಿದೆ. ಅಂಕಪಟ್ಟಿಯಲ್ಲಿ ಹೈದ್ರಾಬಾದ್ ಎರಡನೇ ಸ್ಥಾನದಲ್ಲಿದ್ದು, ಪಂಜಾಬ್ ಮೂರನೇ ಸ್ಥಾನದಲ್ಲಿದೆ. ಕಳೆದ ರಾತ್ರಿ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತಾ, ರಾಜಸ್ತಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿತ್ತು.