ಲಂಡನ್‌ನಲ್ಲಿ ಇಂದು ಮಧ್ಯಾಹ್ನ ಆರಂಭಗೊಳ್ಳಲಿರುವ ಕಾಮನ್‌ವೆಲ್ತ್ ಸರ್ಕಾರಿ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ.

ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಇಂದು ಮಧ್ಯಾಹ್ನ ಆರಂಭಗೊಳ್ಳಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಈ ಶೃಂಗಸಭೆಯ ಘೋಷವಾಕ್ಯ – ಪ್ರತಿಯೊಬ್ಬರ ಭವಿಷ್ಯದೆಡೆಗೆ ನಿಟ್ಟಿನಲ್ಲಿ ಎಂಬುದಾಗಿದೆ. ಈ ದ್ವೈವಾರ್ಷಿಕ ಸಭೆಯಲ್ಲಿ ೫೩ ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾಮನ್‌ವೆಲ್ತ್ ರಾಷ್ಟ್ರಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳನ್ನು ಹತ್ತಿಕ್ಕುವುದು ಮತ್ತು ಆ ರಾಷ್ಟ್ರಗಳ ಅಭಿವೃದ್ಧಿ, ರಕ್ಷಣೆ ಮತ್ತು ಸುಸ್ಥಿರ ಭವಿಷ್ಯ ಕಟ್ಟಿಕೊಡುವುದಕ್ಕೆ ಸಭೆಯಲ್ಲಿ ಒತ್ತು ನೀಡಲಾಗುವುದು. ಕಾಮನ್‌ವೆಲ್ತ್‌ನಲ್ಲಿ ಹಲವು ದೇಶಗಳಿದ್ದು, ಅವುಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಲಾಗುವುದು. ಪ್ರಧಾನಮಂತ್ರಿ ಮೋದಿ ಅವರು ಈ ಸಭೆಯಲ್ಲಿ ಭಾಗವಹಿಸಿದ ನಂತರ ಹಲವು ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಮೋದಿ ಅವರು ನಿನ್ನೆ ಸಂಜೆ ಬ್ರಿಟನ್ ಪ್ರಧಾನಿ ಥೆರೆಸಾ ಮೆ ಅವರೊಂದಿಗೆ ಹಾಗೂ ರಾಣಿ ಎಲಿಜಬತ್ ಮತ್ತು ಯುವರಾಜ ಚಾರ್ಲ್ಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು.