ಇರಾನ್ ಮೇಲಿನ ಅಮೆರಿಕ ನಿರ್ಬಂಧದ ಪರಿಣಾಮಗಳು

ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ರಷ್ಯನ್ ಫೆಡರೇಶನ್, ಫ್ರಾನ್ಸ್, ಚೀನಾ, ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟ ನಡುವೆ 2015ರಲ್ಲಿ ಜಾಯಿಂಟ್ ಕಾಂಪ್ರೆಹೆನ್ಸಿವ್ ಪ್ಲಾನ್ ಆಫ್ ಆಕ್ಷನ್(ಜೆಸಿಪಿಓಎ)ನಿಂದ ಹಿಂದೆ ಬರುವ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಘೋಷಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜುಲೈ 20, 2015ರ 2231ರ ನಿರ್ಣಯದ ಮೂಲಕ JCPOAಯ ಅವಿರೋಧ ಅನುಮೋದನೆ ನೀಡಿ ಇರಾನ್ ಮೇಲೆ ವಿಶ್ವಸಂಸ್ಥೆಯು ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಿತ್ತು. ಪರಮಾಣು ಪ್ರಸರಣ ಒಪ್ಪಂದದ ಸಹಿಗಾರನಾಗಿ ಇರಾನ್ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್ ಈ ನಿರ್ಬಂಧಗಳನ್ನು 2006 ರಲ್ಲಿ ವಿಧಿಸಿತ್ತು. JCPOAಯಿಂದ ಯುನೈಟೆಡ್ ಸ್ಟೇಟ್ಸ್ ಹೊರ ಬರುವ ನಿರ್ಧಾರದಿಂದಾಗಿ ಇರಾನ್ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ಅಮೆರಿಕ ವಿಧಿಸುತ್ತದೆ. ಆದರೆ ಇದು ಭದ್ರತಾ ಮಂಡಳಿಯಿಂದ ಅನುಮೋದಿಸಲ್ಪಟ್ಟಿಲ್ಲ.

ಆದಾಗ್ಯೂ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾನೂನಿನ ಅಡಿಯಲ್ಲಿ, ವಿದೇಶಿ ಕಂಪನಿಗಳು ಅಥವಾ ವ್ಯಕ್ತಿಗಳು ಇರಾನ್ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ಹೇರಿದರೆ ಅಮೆರಿಕದಲ್ಲಿರುವ ಸಂಸ್ಥೆಗಳ ಮೇಲೆ ಹಾನಿ ಮಾಡಲಿದೆ. ಏಕಪಕ್ಷೀಯ ನಿರ್ಬಂಧಗಳ ಕಾರಣದಿಂದಾಗಿ ಭಾರತದ ಪ್ರತಿಕ್ರಿಯೆ ಮೇಲೂ ಪ್ರಮುಖ ಪರಿಣಾಮಗಳನ್ನು ಬೀರಲಿದೆ.

ಫ್ರಾನ್ಸ್, ಜರ್ಮನಿ ನೇತೃತ್ವದ ಯುರೋಪಿಯನ್ ಯೂನಿಯನ್ ಅಮೆರಿಕದ ನಿರ್ಧಾರಕ್ಕೆ ಎಚ್ಚರಿಕೆ ಪ್ರತಿಕ್ರಿಯೆಯನ್ನು ನೀಡಿವೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮತ್ತು ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ವಾಷಿಂಗ್ಟನ್ ಗೆ ಈ ಹಿಂದೆ ತೆರಳಿ ಈ ತೀರ್ಮಾನ ಕೈಗೊಳ್ಳಬೇಡಿ ಎಂದು ಒಪ್ಪಿಸುವ ಪ್ರಯತ್ನ ಮಾಡಿದ್ದರು. ಎರಡೂ ದೇಶಗಳೂ ಇರಾನ್ ನಲ್ಲಿ ಪ್ರಮುಖ ಪಾಲುದಾರಿಕೆಯನ್ನು ಹೊಂದಿವೆ. ಅಮೆರಿಕದ ತೀರ್ಮಾನದ ಬಗ್ಗೆ ಇರಾನ್ ನಲ್ಲೂ ಪ್ರತಿಭಟನೆಗಳು ನಡೆದಿವೆ.

ಮಧ್ಯಪ್ರಾಚ್ಯದಲ್ಲಿ ಈ ನಡೆ ಉದ್ವಿಗ್ನ ವಾತಾವರಣ ಸೃಷ್ಟಿಸಬಹುದು. ಈಗಾಗಲೇ ಈ ಪ್ರದೇಶ ಸಾಕಷ್ಟು ಒತ್ತಡದಲ್ಲಿದ್ದು, ಜಾಗತಿಕ ಆರ್ಥಿಕತೆ ಮೇಲೆ ಜಿಸಿಪಿಒಎ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇತ್ತು. ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆ ಪ್ರತಿ ಬ್ಯಾರೆಲ್ ಗೆ ಡಾಲರ್ 72 ಆಗಿದ್ದು, ಒಂದುವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆಯಾಗಬಲ್ಲದು.

ಭಾರತದ ಆರ್ಥಿಕತೆ ಮತ್ತು ವ್ಯೂಹಾತ್ಮಕ ಹಿತಾಸಕ್ತಿಗಳ ಮೇಲೂ ನೇರ ಪರಿಣಾಮ ಉಂಟಾಗಬಲ್ಲದು. ವಿಶ್ವದಲ್ಲಿ ಬೆಳೆಯುತ್ತಿರುವ ಏಕೈಕ ಆರ್ಥಿಕತೆ ಭಾರತ ಆಗಿರುವುದರಿಂದ ಭಾರತದ ಇರಾನ್ ನಿಂದ ಸುಮಾರು 27 ಮಿಲಿಯನ್ ಟನ್ ನಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆರ್ಥಿಕ ಪ್ರಗತಿಗೆ ಪೂರಕವಾಗಿ ಇಂಧನಕ್ಕೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಆದರೆ ಅಮೆರಿಕದ ಏಕಪಕ್ಷೀಯ ನಿರ್ಧಾರ ಭಾರತದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಬೆಲೆಯಲ್ಲಿ ಏರುಪೇರಾಗುವ ಸಾಧ್ಯತೆ ಕಾಣುತ್ತಿದೆ.

ಇರಾನ್ ನ ಫರ್ಜಾದ್ ಬಿ ಗ್ಯಾಸ್ ಫೀಲ್ಡ್ ನಲ್ಲಿ ಹೂಡಿಕೆಗಳನ್ನು ಮಾಡಲು ಭಾರತಕ್ಕೆ ಕಷ್ಟವಾಗಬಹುದು. ಪರಿಸರ ಸ್ನೇಹಿ ನೈಸರ್ಗಿಕ ಅನಿಲಗಳನ್ನು ಬಳಸಿಕೊಳ್ಳಬೇಕು ಎಂಬ ಭಾರತದ ಲೆಕ್ಕಾಚಾರಗಳಿಗೆ ಹಿನ್ನಡೆಯಾಗಬಹುದು. ಇರಾನ್ ಚಾಬಹಾರ್ ಪೋರ್ಟ್ ಯೋಜನೆಯಲ್ಲಿ ಭಾರತ ಸಾಕಷ್ಟು ಹೂಡಿಕೆಗಳನ್ನು ಮಾಡಿದೆ. ಅಫ್ಘಾನಿಸ್ತಾನ ಸಂಪರ್ಕಿಸುವ ಮತ್ತು ಕೇಂದ್ರ ಏಷ್ಯಾ ಸಂಪರ್ಕಿಸುವ ಚಾಬಹಾರ್ – ಜಹೆದನ್ ರೈಲ್ವೆ ಸಂಪರ್ಕ, ಇರಾನ್, ಭಾರತ ಮತ್ತು ರಷ್ಯಾದಿಂದ ಏಷ್ಯಾ ಮೂಲಕ ಯೂರೋಪನ್ ಅನ್ನು ಸಂಪರ್ಕಿಸುವ ಇಂಟರ್ ನ್ಯಾಷನಲ್ ನಾರ್ಥ್ ಸೌತ್ ಸಾರಿಗೆ ಕಾರಿಡಾರ್ ಯೋಜನೆಯಲ್ಲೂ ಭಾರತ ಹೂಡಿಕೆ ಮಾಡಿದೆ. ಅಫ್ಘಾನಿಸ್ತಾನ ಮತ್ತು ಕೇಂದ್ರ ಏಷ್ಯಾವನ್ನು ಹಿಂದೂ ಮಹಾಸಾಗರ ಮೂಲಕ ಸಂಪರ್ಕಿಸುವ ಯೋಜನೆಗಳು ಇದಾಗಿವೆ.

ಅಂತರರಾಷ್ಟ್ರೀಯ ಸಮುದಾಯವು ಜಾಗತಿಕ ಆರ್ಥಿಕತೆಯ ಮೇಲೆ ನಿರ್ಬಂಧಗಳನ್ನು ಉಂಟುಮಾಡುವ ಅಮೆರಿಕದ ಕ್ರಮದ ಬಗ್ಗೆ ಎಚ್ಚರಗೊಳ್ಳಬೇಕಾಗಿದೆ. ಇರಾನ್ ಜತೆ ತೊಡಗಿಸಿಕೊಳ್ಳಲು ಯೂರೋಪ್ ಉತ್ಸುಕವಾಗಿದೆ. ಜೆ.ಸಿ.ಪಿ.ಒ.ಎ ನಂತರ ಯು.ಎಸ್. ಕಂಪೆನಿಗಳು ಕೂಡ ಇರಾನ್ ಜತೆಗೆ ವ್ಯಾಪಾರ ಮಾಡಲು ಉತ್ಸುಕರಾಗಿದ್ದವು. ಆದರೆ, ಈಗ ಪರಿಸ್ಥಿತಿ ಇಳಿಮುಖವಾಗಿದೆ.

ಯುಎಸ್ ನಿರ್ಬಂಧಗಳ ಉದ್ದೇಶದ ದೀರ್ಘಕಾಲೀನ ಪರಿಣಾಮಗಳನ್ನು ಭಾರತವು ಗಣನೆಗೆ ತೆಗೆದುಕೊಳ್ಳಬೇಕಾಗಿದೆ, ಇದು ಗಲ್ಫ್ ಸೇರಿದಂತೆ ಭಾರತದ ಹತ್ತಿರದ ನೆರೆಹೊರೆ ರಾಷ್ಟ್ರಗಳಲ್ಲೂ ಸಮಸ್ಯೆ ಸೃಷ್ಟಿಸಬಹುದು. ಸುಮಾರು 8 ಮಿಲಿಯನ್ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಗಲ್ಫ್ ಪ್ರದೇಶದಲ್ಲೂ ಕೆಲಸ ಮಾಡುತ್ತಿರುವ ಮಂದಿಯ ಮೇಲೂ ಪರಿಣಾಮ ಬೀರಲಿದೆ. ಏಕೆಂದರೆ ಅವರ ಹಣವನ್ನು ಭಾರತೀಯ ಗೃಹಬಳಕೆಯ ಆರ್ಥಿಕತೆಯಲ್ಲಿ ನೇರವಾಗಿ $ 40 ಶತಕೋಟಿಯಷ್ಟು ಹಣವನ್ನು ಹೂಡಲಾಗುತ್ತಿದೆ. ಈ ನಿರ್ಬಂಧಗಳು ಸಮುದ್ರ ಮತ್ತು ವಾಯು ಸಂಪರ್ಕಗಳ ಸ್ಥಿರತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರಬಹುದು.

ಲೇಖನ : ಎಎಂಬಿ. ಅಶೋಕ್ ಮುಖರ್ಜಿ, ವಿಶ್ವಸಂಸ್ಥೆಗೆ ಭಾರತದ ಮಾಜಿ ಖಾಯಂ ಪ್ರತಿನಿಧಿ