ಐಪಿಎಲ್ ಕ್ರಿಕೆಟ್ : ಮುಂಬೈನಲ್ಲಿಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಮುಖಾಮುಖಿ

ಐಪಿಎಲ್ ಕ್ರಿಕೆಟ್ ನಲ್ಲಿ ಇಂದು ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.

ನಿನ್ನೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ತಾನ್ ರಾಯಲ್ಸ್ ತಂಡವನ್ನು ೬ ವಿಕೆಟ್ ಗಳಿಂದ ಮಣಿಸಿತು. ಬೌಲಿಂಗ್ ಆಯ್ಕೆ ಮಾಡಿಕೊಂಡ ಕೊಲ್ಕತ್ತಾ ತಂಡ ರಾಜಸ್ತಾನ್ ತಂಡವನ್ನು ೧೯ ಓವರ್ ಗಳಲ್ಲಿ ೧೪೨ ರನ್ ಗಳಿಗೆ ಕಟ್ಟಿಹಾಕಿತು. ನಂತರ ಆತಿಥೇಯ ತಂಡ ಇನ್ನೂ ಎರಡು ಓವರ್ ಗಳು ಬಾಕಿ ಇರುವಂತೆಯೇ ಜಯ ಗಳಿಸಿತು.

ಓಪನರ್ ಕ್ರಿಸ್ ಲಿನ್ ೪೫ ರನ್ ಹಾಗೂ ನಾಯಕ ದಿನೇಶ್ ಕಾರ್ತೀಕ್ ಅಜೇಯ ೪೧  ರನ್ ಗಳಿಸಿದರು. ಯಾದವ್ ಅವರು ಪಂದ್ಯ ಪುರುಷೋತ್ತಮ ಎನಿಸಿಕೊಂಡರು. ಇದರೊಂದಿಗೆ ಕೊಲ್ಕತ್ತಾ ತಂಡ ೮ ತಂಡಗಳ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಬಲಪಡಿಸಿಕೊಂಡಿದೆ. ರಾಜಸ್ತಾನ್ ನಾಲ್ಕನೇ ಸ್ಥಾನದಲ್ಲಿದೆ. ಸನ್ ರೈಸರ್ ಹೈದರಾಬಾದ್ ಮೊದಲನೇ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿವೆ. ಪಂಜಾಬ್ ಪ್ರಸಕ್ತವಾಗಿ ಐದು ಹಾಗೂ ಹಾಲಿ ಚಾಂಪಿಯನ್ ಮುಂಬೈ ತಂಡ ಆರನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳು ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಕೊನೆಯ ಸ್ಥಾನದಲ್ಲಿದೆ