ದೇಶದ ಹಲವೆಡೆ ಬಿರುಗಾಳಿ, ಮಳೆ ಸಿಡಿಲಿಗೆ ೬೯ ಮಂದಿ ಸಾವು. ಇನ್ನೂ ೨-೩ ದಿನಗಳ ಕಾಲ ವಾಯುವ್ಯ, ಪೂರ್ವ ಹಾಗೂ ದಕ್ಷಿಣದ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ-ಹವಾಮಾನ ಇಲಾಖೆ ಮುನ್ಸೂಚನೆ

ದೇಶದಲ್ಲಿ ನಿನ್ನೆವರೆಗೆ ಧೂಳಿನಿಂದ ಕೂಡಿದ ಬಿರುಗಾಳಿ, ಮಳೆ, ಸಿಡಿಲಿನಿಂದಾಗಿ ಮೃತಪಟ್ಟವರ ಸಂಖ್ಯೆ ೬೯ಕ್ಕೇರಿದೆ. ಉತ್ತರ ಪ್ರದೇಶ ಒಂದರಲ್ಲಿಯೇ ೩೮ ಮಂದಿ ಸಾವಿಗೀಡಾಗಿದ್ದರೆ, ಪಶ್ಚಿಮ ಬಂಗಾಳ ೧೨, ಆಂಧ್ರ ಪ್ರದೇಶ ೧೩, ಬಿಹಾರ್ ೪ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹಾಗೂ ಇತರ ಹಲವಾರು ಜಿಲ್ಲೆಗಳಲ್ಲಿಯೂ ಸಾವು ಸಂಭವಿಸಿದೆ ಎಂದು ನಮ್ಮ ಭಾತ್ಮೀದಾರರು ವರದಿ ಮಾಡಿದ್ದಾರೆ. ಆಂಧ್ರಪ್ರದೇಶದ ಕಡಪ, ವಿಶಾಖಪಟ್ಟಣಂ, ಶ್ರೀಕಾಕುಲಮ್ ಜಲ್ಲೆಯಲ್ಲಿ ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಎಂದು ನಮ್ಮ ಭಾತ್ಮೀದಾರರು ವರದಿ ಮಾಡಿದ್ದಾರೆ. ಬಿಹಾರ್‌ನಲ್ಲಿ ಕಳೆದ ರಾತ್ರಿ ಆನಿಕಲ್ಲು ಮಳೆಗೆ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಆಡಳಿತ ವರದಿ ಮಾಡಿದೆ. ಮೃತಪಟ್ಟವರ ಕುಟುಂಬದವರಿಗೆ ಮುಖ್ಯಮಂತಿ ನಿತೀಶ್ ಕುಮಾರ್ ಪರಿಹಾರವನ್ನು ಘೋಷಿಸಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟ ಕುಟುಂಬದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನ ಮಂತ್ರ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.