ಮತ್ತು ಅಂತಾರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಮಹಿಳೆಯರ ವಿಭಾಗದ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಹೀನಾ ಸಿದ್ದುಗೆ ಸ್ವರ್ಣ ಪದಕ.

ಜರ್ಮನ್‌ನ ಹ್ಯಾನೋರ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ೧೦ ಮೀಟರ್‌ನ ಏರ್ ಪಿಸ್ತೂಲು ವಿಭಾಗದಲ್ಲಿ ಭಾರತದ ಹೀನಾ ಸಿದ್ದು ಚಿನ್ನದ ಪದಕ ಗೆದ್ದುಕೊಂಡರೆ,  ಪಿ.ಶ್ರೀನಿವೇತ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮುಂದಿನ ವಾರ   ಮುನಿಚ್‌ನಲ್ಲಿ ಐಎಸ್‌ಎಸ್‌ಎಫ್ ಪಂದ್ಯಾವಳಿ ನಡೆಯಲಿದ್ದು, ಹೀನಾ ಸಿದ್ದು ಮತ್ತು ಶ್ರೀನಿವೇತ ಅವರು ಸ್ಥಾನ ಪಡೆಯಲಿದ್ದಾರೆ.