ಹಣ ದುರುಪಯೋಗ ಪ್ರಕರಣದಲ್ಲಿ ಬಾಂಗ್ಲಾ ದೇಶ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು

 

ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲೀದಾ ಜಿಯಾ ಅವರಿಗೆ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.  ಅವರಿಗೆ ಜಾಮೀನು ನೀಡುವ ಹೈಕೋರ್ಟ್ ಆದೇಶವನ್ನು ಅಪೆಕ್ಸ್ ಕೋರ್ಟ್ ಎತ್ತಿ ಹಿಡಿದಿತ್ತು. ೭೨ ವರ್ಷದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ ಮುಖ್ಯಸ್ಥೆ, ಜಿಯಾ ಅನಾಥ ದತ್ತಿ ಸಂಸ್ಥೆಗೆಂದು ಮೀಸಲಾದ ಸುಮಾರು ೨೫೦, ೦೦೦ ಅಮೆರಿಕನ್ ಡಾಲರ್ ನಷ್ಟು ಹಣವನ್ನು ಹಣ ದುರುಪಯೋಗ ಪಡಿಸಿಕೊಂಡ ಪ್ರಕರಣದಲ್ಲಿ ಫೆಬ್ರವರಿ ೮ ರಂದು ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ಹೈಕೋರ್ಟ್ ಮಾರ್ಚ್ ೧೨ ರಂದು ಜಿಯಾ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನಂತರ ಭ್ರಷ್ಟಾಚಾರ ವಿರೋಧಿ ಆಯೋಗ ಮತ್ತು ಸರ್ಕಾರ ಹೈಕೋರ್ ಆದೇಶವನ್ನು ಪ್ರಶ್ನಿಸಿತ್ತು ಮತ್ತು ತಮ್ಮ ಅಪೀಲುಗಳನ್ನು ಮೇಲ್ಮನವಿ ನ್ಯಾಯಾಲಯಕ್ಕೆ ಸಲ್ಲಿಸಿದ್ದವು.

ಗಾಜಾ ಇಸ್ರೇಲ್ ಗಡಿ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಳೆದ ರಾತ್ರಿ ತುರ್ತು ಸಭೆ ನಡೆಸಿತು.

ಜೆರುಸಲೇಂನಲ್ಲಿ ಅಮೆರಿಕ ನಿಯೋಗ ಕಚೇರಿಯನ್ನು ಆರಂಭಿಸಿದ ನಂತರ ಅಲ್ಲಿ ಹಿಂಸಾಚಾರ ನಡೆಯುತ್ತಿದೆ.  ಘಟನೆಯಲ್ಲಿ ಇದುವರೆಗೆ ೫೦ಕ್ಕೂ ಹೆಚ್ಚು ಪ್ಯಾಲೇಸ್ತಿನಿಯರು ಮೃತಪಟ್ಟಿದ್ದು, ೧ ಸಾವಿರದ ೨೦೦ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದಾರೆ.