ಆಡನ್‌ಕೊಲ್ಲಿಯಲ್ಲಿ ’ಸಾಗರ್’ ಚಂಡಮಾರುತ ಕರ್ನಾಟಕ ಸೇರಿದಂತೆ ೫ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಹವಾಮಾನ ಇಲಾಖೆಯ ಕಟ್ಟೆಚ್ಚರ.

ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪದಲ್ಲಿ ’ಸಾಗರ್’ ಚಂಡಮಾರುತದ ಹಿನ್ನೆಲೆಯಲ್ಲಿ ಸೂಕ್ತ ಎಚ್ಚರ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. ಆಡನ್ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ಈ ಬಿರುಗಾಳಿ ಯಮನ್ ದೇಶದ ಆಡನ್ ನಗರದ ಪೂರ್ವೋತ್ತರ ದಿಕ್ಕಿನಲ್ಲಿ ಅಂದಾಜು ೩೯೦ ಕಿಲೋಮೀಟರ್ ದೂರದಲ್ಲಿ ಹಾದು ಹೋಗುತ್ತಿದೆ, ಈ ಪ್ರದೇಶ ಸೊಕೋಟ್ರಾ ದ್ವೀಪಗಳ ವಾಯವ್ಯ ದಿಕ್ಕಿನತ್ತ ೫೬೦ ಕಿಲೋಮೀಟರ್ ದೂರದಲ್ಲಿದೆ ಎಂದು ಹೆಚ್ಚಿನ ಮಾಹಿತಿ ಒದಗಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರಾದ ಡಾ. ಕೆ.ಜೆ. ರಮೇಶ್ ಆಕಾಶವಾಣಿಗೆ ಈ ವಿವರಗಳನ್ನು ನೀಡಿದ್ದು, ಆಡನ್‌ಕೊಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಕೆಯಬಾರದು ಎಂದು ಸೂಚಿಸಿದ್ದಾರೆ.