ಕಾವೇರಿ ನದಿ ನೀರು ನಿರ್ವಹಣಾ ಯೋಜನೆಯನ್ನು ಅಂತಿಮಗೊಳಿಸುವ ಆದೇಶವನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸುವ ಸಾಧ್ಯತೆ

ಕಾವೇರಿ ನಿರ್ವಹಣಾ ಯೋಜನೆಯನ್ನು ಅಂತಿಮಗೊಳಿಸುವ ಆದೇಶವನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸುವ ಸಾಧ್ಯತೆ ಇದೆ.

ದಕ್ಷಿಣದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವೆ ಕಾವೇರಿ ನೀರಿನ ಸುಸೂತ್ರ ಹಂಚಿಕೆಯನ್ನು ಈ ಯೋಜನೆ ನಿರ್ವಹಿಸುವುದು.

ಕಾವೇರಿ ಯೋಜನೆಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಸಂಬಂಧಿಸಿದವರು ನೀಡಿರುವ ಸಲಹೆ – ಅಭಿಪ್ರಾಯಗಳನ್ನು ಪರಿಗಣಿಸುವುದಾಗಿ  ಮುಖ್ಯನ್ಯಾಯಾಧೀಶ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ನಿನ್ನೆ ತಿಳಿಸಿ ತೀರ್ಪು ಕಾಯ್ದಿರಿಸಿತ್ತು.

ನ್ಯಾಯಾಲಯ ಆದೇಶವನ್ನು ಇಂದು ಪ್ರಕಟಿಸುವ ಸಂಭವವಿದೆ. ಒಂದು ವೇಳೆ ನಾಳೆ ಪ್ರಕಟಿಸಲು ಸಾಧ್ಯವಾಗದಿದ್ದಲ್ಲಿ ಈ ತಿಂಗಳ ೨೨ ಅಥವಾ ೨೩ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಮೂರ್ತಿಗಳಾದ ಎ.ಎಂ. ಕನ್ವಿಲ್‌ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಇರುವ ನ್ಯಾಯಪೀಠ ತಿಳಿಸಿದೆ.

ಕಾವೇರಿ ಜಲಾನಯನದ ನಾಲ್ಕು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆ ಬಗ್ಗೆ ಆಗಿಂದ್ದಾಗ್ಗೆ ನಿರ್ದೇಶನಗಳನ್ನು ನೀಡಲು ಸಾಧ್ಯವಾಗುವಂತೆ ಕರಡು ಯೋಜನೆಯಲ್ಲಿ ಕೆಲ ಮಾರ್ಪಡುಗಳನ್ನು ಮಾಡುವಂತೆ ಸುಪ್ರೀಂಕೋರ್ಟ್ ನಿನ್ನೆ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿತ್ತು.