ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ, ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಉಗ್ರರು-ಸೇನಾ ಯೋಧರ ನಡುವೆ ಗುಂಡಿನ ಚಕಮಕಿ

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಉಗ್ರರು ಹಾಗೂ ಸೇನಾ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಗಡಿ ನಿಯಂತ್ರಣ ರೇಖೆಯ ಬಳಿ ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಉಗ್ರರು ಅಪ್ರಚೋದಿತ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡ ಗುಂಡಿನ ಸುರಿಮಳೆಗರೆದರು ಎಂದು ಹೆಚ್ಚು ಸೇನಾಧಿಕಾರಿಗಳು ಆಕಾಶವಾಣಿಗೆ ಮಾಹಿತಿ ನಿಡಿದ್ದಾರೆ.

ಮಧ್ಯರಾತ್ರಿ ೨ ಗಂಟೆ ಸುಮಾರಿಗೆ ಬೊನಿಖಾನ್ ಪ್ರದೇಶದ ಬಳಿ ಗುಂಡಿನ ದಾಳಿ ನಡೆಯಿತು. ಭಾರತೀಯ ಯೋಧರು ಪ್ರತಿದಾಳಿ ನಡೆಸುತ್ತಿದ್ದಂತೆ ಉಗ್ರರು ಪರಾರಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಒಂದು ತಿಂಗಳ ಕಾಲ ಕದನ ವಿರಾಮ ಘೋಷಣೆ ಮಾಡಿದ್ದು, ಉಗ್ರ ನಿಗ್ರಹ ಚಟುವಟಿಕೆಗಳಿಗೆ ಬ್ರೇಕ್ ನೀಡಿತ್ತು.