ವಾರಾಣಸಿ ಮೇಲ್ಸೇತುವೆ ಕುಸಿತ ಪ್ರಕರಣ; ಉತ್ತರ ಪ್ರದೇಶ ಸೇತುವೆಗಳ ನಿಗಮದ ನಿರ್ದೇಶಕರ ವಜಾಕ್ಕೆ ರಾಜ್ಯ ಸರ್ಕಾರದ ಆದೇಶ.

ವಾರಾಣಸಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ ಪ್ರಕರಣ ಸಂಬಂಧ ಉತ್ತರ ಪ್ರದೇಶ ಸೇತುವೆಗಳ ನಿರ್ಮಾಣ ನಿಗಮದ ನಿರ್ದೇಶಕ ರಾಜನ್ ಮಿತ್ತಲ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಕಳೆದ ಮಂಗಳವಾರ ಸಂಭವಿಸಿದ ಈ ದುರಂತದಲ್ಲಿ ೧೫ ಜನ ಸಾವಿಗೀಡಾದರು, ೧೨ ಜನ ಗಂಭೀರವಾಗಿ ಗಾಯಗೊಂಡಿದ್ದರು. ಮಿತ್ತಲ್‌ಗೆ ಸೇರಿದ್ದ ನಿರ್ಮಾಣ ಸಂಸ್ಥೆ ಈ ಕಾಮಗಾರಿಯನ್ನು ನಡೆಸುತ್ತಿತ್ತು. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಸಮಿತಿಯನ್ನು ಆ ರಾಜ್ಯದ ಮುಖ್ಯಮಂತ್ರಿ ರಚಿಸಿದ್ದು, ಇಂದು ಸಂಜೆ ಸಮಿತಿ ತನ್ನ ವರದಿಯನ್ನು ಸಲ್ಲಿಸಲಿದೆ. ಅದರ ಆಧಾರದ ಮೇಲೆ ಪ್ರಕರಣ ಸಂಬಂಧ ಯುಪಿ ಸೇತುವೆ ನಿರ್ಮಾಣ ನಿಗದಮ ಇನ್ನೂ ೭ ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.