೨೦೧೯ರ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ದಿನಕ್ಕೆ ೪೦ ರಿಂದ ೪೫ ಕಿಲೋಮೀಟರ್ ತಲುಪಲಿದೆ – ನಿತಿನ್ ಗಡ್ಕರಿ ಮಾಹಿತಿ.

ಕೇಂದ್ರದ ಎನ್.ಡಿ.ಎ ಸರ್ಕಾರ ೪ ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸುದ್ದಿ ಸೇವಾ ವಿಭಾಗ, ವಿವಿಧ ಸಚಿವಾಲಯಗಳ ಸಾಧನೆಗಳನ್ನು ಬಿಂಬಿಸುವ ‘ಚಾರ್ ಸಾಲ್-ಮೋದಿ ಸರ್ಕಾರ್’ ಎಂಬ ವಿಶೇಷ ಕಾರ್ಯಕ್ರಮ ಸರಣಿಯನ್ನು ಆರಂಭಿಸಲಿದೆ. ಇಂದಿನ ಕಾರ್ಯಕ್ರಮದ ಧ್ಯೇಯ- ‘ಕನೆಕ್ಟಿಂಗ್ ಇಂಡಿಯಾ’- ಎನ್ನುವುದಾಗಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಸಂದರ್ಶನ ಬಿತ್ತರಗೊಳ್ಳಲಿದೆ. ೨೦೧೯ ರ ಮಾರ್ಚ ವೇಳೆಗೆ ಗಂಗಾನದಿ ಶೇಕಡ ೭೦ ರಿಂದ ೮೦ರಷ್ಟು ಸ್ವಚ್ಚಗೊಳ್ಳಲಿದೆ ಎಂದು ಗಡ್ಕರಿ, ಆಕಾಶವಾಣಿಗೆ ತಿಳಿಸಿದ್ದಾರೆ. ಗಂಗಾನದಿಯ ಬಹು ಉದ್ದೇಶಿತ ಕಾರ್ಯಜಾಲಕ್ಕೆ ವಾರಾಣಸಿಯಲ್ಲಿ ಇದೇ ಅಕ್ಟೋಬರ್ ನಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು. ೨೦೧೯ರ ಮಾರ್ಚ ವೇಳೆಗೆ ದಿನವೊಂದಕ್ಕೆ ೪೦ ರಿಂದ ೪೫ ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ತಲುಪಲಿದೆ ಎಂದ ಸಚಿವರು, ಹೆದ್ದಾರಿ ನಿರ್ಮಾಣಕ್ಕಾಗಿ ೬ ಲಕ್ಷ ಕೋಟಿ ರೂಪಾಯಿ ಬಂಡವಾಳ ಗುರಿ ನಿಗಧಿಯಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಶನ ರಾಜಧಾನಿ ಮತ್ತು ಎಫ್.ಎಂ.ಗೋಲ್ಡ್ ಹಾಗೂ ಹೆಚ್ಚುವರಿ ತರಂಗಾಂತರಗಳಲ್ಲಿ ಇಂದು ರಾತ್ರಿ ೯ ಗಂಟೆ ೩೦ ನಿಮಿಷಕ್ಕೆ ಮೂಡಿಬರಲಿದೆ.