ಗ್ರಾಮಗಳಲ್ಲಿ ೫ ಸಾವಿರ ವೈಫೈ ಚೌಪಾಲ್‌ಗಳ ಆರಂಭ – ಏಕಗವಾಕ್ಷಿ ಕೇಂದ್ರಗಳ ಮೂಲಕ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸುವ ಸೌಲಭ್ಯ.

ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವ ರವಿಶಂಕರ್ ಪ್ರಸಾದ್ ಗ್ರಾಮೀಣ ಪ್ರದೇಶಗಳಲ್ಲಿ ೫ ಸಾವಿರ ವೈಫೈ ಸೆಂಟರ್‌ಗಳಿಗೆ ನವದೆಹಲಿಯಿಂದ ನಿನ್ನೆ ಚಾಲನೆ ನೀಡಿದರು.

ಇದೇ ವೇಳೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈಲ್ವೆ ಟಿಕೆಟ್ ವಿತರಿಸುವ ವ್ಯವಸ್ಥೆಗೆ ಚಾಲನೆ ನೀಡಿದರು.

ಭಾರತ್ ನೆಟ್ ಮೂಲಕ ಹಳ್ಳಿಗಳಲ್ಲಿ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ವಿವಿಧ ಡಿಜಿಟಲ್ ಕಾರ್ಯಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಇಂಟರ್‌ನೆಟ್ ಸೌಕರ್ಯಗಳನ್ನು ಒದಗಿಸುವುದು ಈ ವೈಫೈ ಸೆಂಟರ್‌ಗಳ ಮುಖ್ಯ ಕಾರ್ಯವಾಗಿರಲಿದೆ.