ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಕುಟುಂಬಕ್ಕೆ ಸೇರಿದ ಸುಮಾರು ೪೪.೭೫ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ –

ಐಆರ್ ಸಿಟಿಸಿ ಹೋಟೆಲ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಕುಟುಂಬದ ಒಡೆತನಕ್ಕೆ ಸೇರಿದ ಸುಮಾರು ೪೪. ೭೫ ಕೋಟಿ ರೂಪಾಯಿ ಮೌಲ್ಯದ ೧೧ ಪ್ಲ್ಯಾಟ್ ಗಳ್ನು ಜಾರಿ ನಿರ್ದೇಶನಾಲಯ ಪಾಟ್ನಾದಲ್ಲಿ ನಿನ್ನೆ ಜಪ್ತಿ ಮಾಡಿದೆ. ಲಾಲ್ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಹಾಗೂ ಇತರರ ವಿರುದ್ಧ ಕಳೆದ ವರ್ಷದ ಜುಲೈನಲ್ಲಿ  ಜಾರಿ ನಿರ್ದೇಶನಾಲಯ ಪಿಎಂಎಲ್ ಎ ಅಡಿಯ ದೂರು ದಾಖಲಿಸಿತ್ತು.