ಕೊರಿಯನ್ ಪ್ರಾಂತ್ಯದಲ್ಲಿ ಹೊಸ ಯುಗದ ಉದಯ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಯು ನಡುವಿನ ಸಿಂಗಾಪುರದ ಐತಿಹಾಸಿಕ ಶೃಂಗ ಸಭೆಯು ಕೊರಿಯನ್ ಪ್ರಾಂತ್ಯದ ಹೊಸ ಯುಗದ ಉದಯಕ್ಕೆ ನಾಂದಿ ಹಾಡಿದೆ. ವಿಶ್ವದ ದೊಡ್ಡ ಶಕ್ತಿಗಳು ಕೊರಿಯಾದ ಜನರ ವಿಭಜನೆ ಮಾಡಿದ ಬಳಿಕ ಮತ್ತು 1950-53ರ ವಿನಾಶಕಾರಿ ಕೊರಿಯಾ ಯುದ್ಧ ನಂತರ, 1953 ರ ಜುಲೈನಲ್ಲಿ ಯುಎನ್ ಕಮ್ಯಾಂಡ್, ಚೀನೀವಾಲಂಟಿಯರ್ಸ್ ಆರ್ಮಿ ಮತ್ತು ಉತ್ತರ ಕೊರಿಯಾದ ಸೈನ್ಯದ ನಡುವೆ ಹಾಕಲ್ಪಟ್ಟ ಸಹಿ ಕಾಲಾಂತರದಲ್ಲಿ ಮಹತ್ವ ಕಳೆದುಕೊಂಡಿತ್ತು.

ಕಳೆದ 12 ತಿಂಗಳಿಂದ ಉತ್ತರ ಮತ್ತು ದಕ್ಷಿಣ ಕೊರಿಯಾ ಜನರು ಕೆಲವೊಮ್ಮೆ ಅಮೆರಿಕದಿಂದ ಯುದ್ಧದ ಭೀತಿಯನ್ನು ಎದುರಿಸುತ್ತಿದ್ದರು ಮತ್ತು ಕೆಲವೊಮ್ಮೆ ಶಾಂತಿಯ ಕಡೆ ವಾಲುತ್ತಿದ್ದರು. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಯು ಅವರು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇಯ್ ಇನ್ ಅವರೊಂದಿಗೆ ನಡೆಸದ ಮಾತುಕತೆ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರಕಿದ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಿಂದಲೇ ಸಾಕಷ್ಟು ಬದಲಾವಣೆಗಳಿಗೆ ಈ ಎರಡು ದೇಶಗಳು ಸಾಕ್ಷಿಯಾಗುತ್ತಿವೆ.

ಅಧ್ಯಕ್ಷರು ಮೂನ್ ಜೇ-ಇನ್ ಮತ್ತು ಅಧ್ಯಕ್ಷ ಕಿಮ್ ಜೊಂಗ್-ಯು ನಡುವಿನ ಏಪ್ರಿಲ್ 27 ರ ಶೃಂಗಸಭೆ ಮೊದಲ ಸ್ಪಷ್ಟವಾದ ಹೆಗ್ಗುರುತಾಗಿದೆ. ಐತಿಹಾಸಿಕವಾದ ‘ಪನ್ಮಂಜೊಮ್ ಶಾಂತಿ ಘೋಷಣೆ ಶಾಂತಿ,ಸಮೃದ್ಧತೆ ಮತ್ತು ಕೊರಿಯಾದ ಪೆನಿನ್ಸುಲಾ ಏಕೀಕರಣ’ವು,ಟ್ರಂಪ್-ಕಿಮ್ ಶೃಂಗಸಭೆಗೆ ಮುನ್ನುಡಿ ಬರೆಯಿತು.

ಸಭೆಯಲ್ಲಿ ಯುಎಸ್ ಮತ್ತು ಉತ್ತರ ಕೊರಿಯಾದ ನಡುವೆ ವಿವರವಾದ ಮತ್ತು ಕಠಿಣ ಮಾತುಕತೆಯ ಸಂಧಾನ ನಡೆಯಿತು. ಕಳೆದ ತಿಂಗಳು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಭೆ ರದ್ದಾದ ಕುರಿತು ತಿಳಿಸಿದ್ದಾಗ ಈ ಶೃಂಗಸಭೆಯ ಹಳಿ ತಪ್ಪಿದೆ ಎಂದು ಭಾವಿಸಲಾಗಿತ್ತು.  ಆದರೆ, ಬುದ್ಧಿವಂತಿಕೆಯಿಂದ, ಅವರು ಮಾತುಕತೆಗಳ ಮುಂದುವರಿಕೆಗಾಗಿ ಬಾಗಿಲು ತೆರೆದಿದ್ದಾರೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ತಕ್ಷಣವೇ ಎರಡನೇ ಶೃಂಗಸಭೆಯನ್ನು ಅಧ್ಯಕ್ಷ ಕಿಮ್ ಜತೆಗೂಡಿ ನಡೆಸಿದರು ಮತ್ತು ಈ ಶೃಂಗಸಭೆಯನ್ನು ರಕ್ಷಿಸಲು ಅಧ್ಯಕ್ಷ ಟ್ರಂಪ್ ಅವರಿಗೂ ಮನವಿ ಮಾಡಿದರು.

12ನೇ ಜೂನ್ ನಂದು ನಡೆದ ಸಭೆ ಸಾಕಷ್ಟು ನಿರೀಕ್ಷೆಗಳನ್ನು ತಲುಪಿದೆ. ಪ್ಯೋಂಗ್ಯಾಂಗ್ ನಲ್ಲಿ ಉತ್ತಮ ಸಾಧನೆ ಮಾಡಿದರು ಉತ್ತರ ಕೊರಿಯಾಕ್ಕೆ ಸಮಾನ ಅಧಿಕಾರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಧ್ಯಕ್ಷ ಟ್ರಂಪ್ ಮತ್ತು ಉ.ಕೊರಿಯಾ ಅಧ್ಯಕ್ಷ ಕಿಮ್ ಪರಸ್ಪರ ಸಕಾರಾತ್ಮಕ ಭಾವನೆಗಳನ್ನು ಹೊರಹಾಕಿದ್ದಾರೆ. ಕಿಮ್ ಅವರನ್ನು ಭೇಟಿ ಮಾಡುವುದು ನಮಗೆ ಗೌರವದ ವಿಷಯ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸಹಿ ಹಾಕುವ ವೇಳೆ ಹೇಳಿದ್ದರು. ಎರಡೂ ನಾಯಕರ ನಡುವೆ ವಿಶೇಷ ಬಾಂಧವ್ಯ ಇದೆ ಎಂದು ಇಬ್ಬರೂ ನಾಯಕರು ತಿಳಿಸಿದರು. ಕಳೆದ ವರ್ಷದಲ್ಲಿ ಇಬ್ಬರು ನಾಯಕರ ನಡುವೆ ಮಾತಿನ ಬಿರುಸು ಜೋರಾಗಿತ್ತು. ಆದರೆ ಈಗ ನಾಟಕೀಯ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ.

ಎರಡೂ ನಾಯಕರು ಸಮಗ್ರ ಒಪ್ಪಂದಕ್ಕೆ ಸಹಿ ಹಾಕಿದರು, ಇದು ಕೊರಿಯಾದ ಪರ್ಯಾಯ ದ್ವೀಪದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸಬಹುದು. ಅಧ್ಯಕ್ಷ ಟ್ರಂಪ್ ಅವರು, ಪರಮಾಣು ನಿಶಸ್ತ್ರೀಕರಣ ಪ್ರಕ್ರಿಯೆಯು ‘ಶೀಘ್ರವಾಗಿ’ ಆರಂಭವಾಗಲಿದೆ ಎಂದು ಹೇಳಿದರು.

2-ಪುಟದ ಒಪ್ಪಂದದಲ್ಲಿ ಹಚ್ಚಿನ ವಿವರಣೆಗಳಿಲ್ಲದಿದ್ದರೂ ಗುರಿ ಸ್ಪಷ್ಟವಿದೆ. ಶಾಂತಿ ಮತ್ತು ಸಮೃದ್ಧಿಗಾಗಿ ‘ಹೊಸ ಯುಎಸ್-ಡಿಪಿಆರ್ಕೆ ಸಂಬಂಧಗಳನ್ನು ಸ್ಥಾಪಿಸುವ ಬದ್ಧತೆಯ ಕುರಿತು ಅದು ಹೇಳಿದೆ. ‘ಕೊರಿಯಾದ ಪರ್ಯಾಯ ದ್ವೀಪದಲ್ಲಿ ಶಾಶ್ವತವಾದ ಮತ್ತು ಸ್ಥಿರವಾದ ಶಾಂತಿ ಆಡಳಿತವನ್ನು ನಿರ್ಮಿಸಲು’ ಜಂಟಿ ಪ್ರಯತ್ನಗಳನ್ನು ಮಾಡುವುದು ಎರಡನೇ ಗುರಿಯಾಗಿದೆ. ಇದು ಉತ್ತರ ಕೊರಿಯಾದ ಆಡಳಿತಭದ್ರತೆಯ ಖಾತರಿಯನ್ನು ಒಳಗೊಂಡಿದೆ. ಮೂರನೆಯ ಗುರಿಯು ‘ಕೊರಿಯನ್ ಪೆನಿನ್ಸುಲಾದ ಸಂಪೂರ್ಣ ಖನಿಜೀಕರಣಕ್ಕೆ’ ಕೆಲಸ ಮಾಡಲು ಡಿಪಿಆರ್ಕೆ ಬದ್ಧತೆ ಪ್ರದರ್ಶಿಸಲಿದೆ. ಆದಾಗ್ಯೂ, ಉತ್ತರಕೊರಿಯಾದ ವಿರುದ್ಧ ನಿರ್ಬಂಧಗಳನ್ನು ಉಲ್ಲಂಘಿಸುವ ಬಗ್ಗೆ ಒಪ್ಪಂದದಲ್ಲಿ ಏನೂ ಹೇಳಲಾಗಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾ ವಿರುದ್ಧದ ನಿರ್ಬಂಧಗಳು ‘ಡಿಪಿಆರ್ಕೆ ಪರಮಾಣುಗಳು ಇನ್ನುಮುಂದೆ ಪರಿಣಾಮಕಾರಿಯಾಗುವುದಿಲ್ಲ ಎಂದು  ಹೇಳಿದ್ದಾರೆ.

ಅನೇಕ ಕಾರಣಗಳಿಗಾಗಿ 12 ಜೂನ್ ರ ಒಪ್ಪಂದ ಅಕ್ಟೋಬರ್ 1994 ರಲ್ಲಿ DPRK ನ ಪರಮಾಣು ನಿಶಸ್ತ್ರೀಕರಣಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ನೆನಪಿಸುತ್ತದೆ, ಇದು ಉತ್ತರ ಕೊರಿಯಾ ಮತ್ತು ಯುಎಸ್ನಡುವೆ ಅಧ್ಯಕ್ಷ ಕ್ಲಿಂಟನ್ ಆಡಳಿತದ ಅವಧಿಯಲ್ಲಿ ಸಹಿ ಹಾಕಲ್ಪಟ್ಟದ್ದಾಗಿದೆ. ಆದರೆ ಎರಡೂ ದೇಶಗಳ ಪರಸ್ಪರ ಆರೋಪ ಪ್ರತ್ಯಾರೋಪಗಳಿಂದಾಗಿ ಒಪ್ಪಂದ ಮುರಿದುಬಿತ್ತು.

ಒಪ್ಪಂದದ ಅನುಷ್ಠಾನದ ವಿವರಗಳನ್ನು ಪರಿಶೀಲಿಸಲು ಯು.ಎಸ್. ಕಾರ್ಯದರ್ಶಿ ಮೈಕ್ ಪೊಂಪೆಯೊ ಮುಂದಾಗಿದ್ದಾರೆ. ಪ್ರಸ್ತುತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಧ್ಯಕ್ಷ ಕಿಮ್ ಜೊಂಗ್-ಯು ನಾಯಕತ್ವಮತ್ತು ನಿರ್ಣಾಯಕತೆಯ ಗುಣಗಳನ್ನು ಪ್ರದರ್ಶಿಸಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಅಪಾರ ಮಹತ್ವ ಪಡೆದುಕೊಳ್ಳಲಿದೆ.

ಭಾರತವು ಶೃಂಗಸಭೆಯನ್ನು ಸಕಾರಾತ್ಮಕ ಬೆಳವಣಿಗೆ ಎಂದು ಸ್ವಾಗತಿಸಿದೆ. ಯುಎಸ್-ಡಿಪಿಆರ್ಕೆ ಶೃಂಗಸಭೆಯ ಫಲಿತಾಂಶಗಳು ಕೊರಿಯನ್ ಪರ್ಯಾಯದ್ವೀಪದಲ್ಲಿ ಶಾಶ್ವತವಾದ ಶಾಂತಿ ಮತ್ತು ಸ್ಥಿರತೆಗೆದಾರಿ ಮಾಡಿಕೊಡಲಿದೆ ಎಂದು ಭಾರತ ಭರವಸೆ ವ್ಯಕ್ತಪಡಿಸಿದೆ. ಪರಮಾಣು ಮತ್ತು ಕ್ಷಿಪಣಿ ತಂತ್ರಜ್ಞಾನದ ರಹಸ್ಯ ವಿನಿಮಯಕ್ಕಾಗಿ ಪಾಕಿಸ್ತಾನ ಮತ್ತು ಡಿಪಿಆರ್ಕೆ ನಡುವಿನ ಹಿಂದೆ ಸಂಬಂಧ ಏರ್ಪಟ್ಟಿತ್ತು. ಇದನ್ನು ಕೊರಿಯನ್ ಪರ್ಯಾಯ ದ್ವೀಪ ಗಣನೆಗೆ ತೆಗೆದುಕೊಂಡು, ಭಾರತದ ನೆರೆಹೊರೆಗೆ ವಿಸ್ತರಿಸುತ್ತಿರುವ ಪ್ರಸರಣ ಸಂಪರ್ಕಗಳ ಬಗೆಗಿನ ನಮ್ಮ ಕಳವಳವನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಹೊರಹಾಕಿದೆ.

ಒಟ್ಟಾರೆಯಾಗಿ, ಈ ಒಪ್ಪಂದ ಕಳೆದ ಎರಡು ವರ್ಷಗಳಿಂದ ಎರಡು ಕೊರಿಯನ್ ದೇಶಗಳ ನಡುವೆ ನಿರ್ಮಾಣವಾಗಿದ್ದ ಯುದ್ಧದ ಮೋಡಗಳನ್ನು ಕಡಿಮೆ ಮಾಡಿದೆ.

ಲೇಖನ : ಸ್ಕಂದ ರಂಜನ್ ತಯಾಲ್, ದಕ್ಷಿಣ ಕೊರಿಯಾದ ಮಾಜಿ ಭಾರತೀಯ ರಾಯಭಾರಿ