ನವದೆಹಲಿಯಲ್ಲಿ ಇಂದು ಸಚಿವರ ಮಂಡಳಿ ಸಭೆಗೆ ಪ್ರಧಾನಿ ಕರೆ, ಎನ್‌ಡಿಎ ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಪರಾಮರ್ಶೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಸಚಿವರ ಮಂಡಳಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಎನ್‌ಡಿಎ ಸರ್ಕಾರದ ಅಡಿಯಲ್ಲಿ ಜಾರಿಯಾಗಿರುವ ಯೋಜನೆಗಳು ಮತ್ತು ಮುಂದಿನ ಕಾರ್ಯತಂತ್ರಗಳ ಕುರಿತು ಪ್ರಧಾನಿ ಪರಾಮರ್ಶೆ ನಡೆಸಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ನಿರ್ಣಾಯಕ ಸಭೆಯಲ್ಲಿ ಎಲ್ಲಾ ಕೇಂದ್ರ ಸಚಿವರು ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದ್ದು, ಈ ಸಭೆ ಸಂಸತ್ತಿನಲ್ಲಿ ನಡೆಯಲಿದೆ. ಸಭೆಯಲ್ಲಿ ಮಳೆಯಿಂದ ತೊಂದರೆಗೀಡಾಗಿರುವ ದೇಶದ ಹಲವು ಪ್ರದೇಶಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಹಾಗೂ ಪರಿಹಾರ ಒದಗಿಸಲಾಗಿದೆ ಎಂಬುದರ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.  ಇದರ ಜತೆಗೆ ಪ್ರಧಾನ ಮಂತ್ರಿ ಜನ ಔಷಧ ಯೋಜನಾ, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನಾ, ಪ್ರಧಾನ ಮಂತ್ರಿ ಉಜ್ವಲ ಯೋಜನಾ, ಸ್ಟಾರ್ಟಪ್  , ಮತ್ತು ಮುದ್ರಾ ಯೋಜನಾ ಸೇರಿದಂತೆ ಇತರ ಯೋಜನೆಗಳ ಕುರಿತು ಪರಾಮರ್ಶೆ ನಡೆಯುವ ನಿರೀಕ್ಷೆ ಇದೆ.