ಮಧ್ಯಮ ಆದಾಯ ವರ್ಗದವರಿಗೆ ಕ್ರೆಡಿಟ್ ಆಧಾರಿತ ಸಬ್ಸಿಡಿ ಯೋಜನೆಯಡಿಲ್ಲಿ ನೀಡುವ ಮನೆಗಳ ವಿಸ್ತೀರ್ಣ ಹೆಚ್ಚಿಸಲು ವಸತಿ ಮತ್ತು ನಗರ ಸಚಿವಾಲಯ ನಿರ್ಧಾರ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಧ್ಯಮ ಆದಾಯ ವರ್ಗದವರಿಗೆ ಕ್ರೆಡಿಟ್ ಆಧಾರಿತ ಬಡ್ಡಿ ಸಬ್ಸಿಡಿ ಯೋಜನೆಯಡಿಯಲ್ಲಿ ನೀಡಲಾಗುವ ಮನೆಗಳ ವಿಸ್ತೀರ್ಣ ಹೆಚ್ಚಿಸಲು ವಸತಿ ಮತ್ತು ನಗರ ಸಚಿವಾಲಯ ಸಮ್ಮತಿ ನೀಡಿದೆ. ಅಧಿಕೃತ ಪ್ರಕಟಣೆ ಪ್ರಕಾರ, ಮಧ್ಯಮ ವರ್ಗದ ಮೊದಲ ದರ್ಜೆಯವರಿಗೆ ೧೨೦ ಚದರ ಅಡಿ ವಿಸ್ತೀರ್ಣದಿಂದ ೧೫೦ ಚದರ ಅಡಿಗೆ ವಿಸ್ತರಿಸಿದರೆ, ಮಧ್ಯಮವರ್ಗ -೨ನೇ ದರ್ಜೆಯವರಿಗೆ  ೧೫೦ರಿಂದ ೨೦೦ ಚದುರ ಅಡಿ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಇದು ನಿರ್ಮಾಣ ವಲಯಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ಕ್ರಮವಾಗಿದೆ ಎಂದು ಭಾವಿಸಲಾಗಿದೆ.