ರಷ್ಯಾದ ಕ್ಯಾಸ್ಪಿಯ್ಸ್ಕಿಯಲ್ಲಿ ನಡೆಯುತ್ತಿರುವ ಉಮಾಖನೊವ್ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದ ಭಾರತ

ರಷ್ಯಾದ ಕ್ಯಾಸ್ಪಿಯ್ಸ್ಕಿಯಲ್ಲಿ ನಿನ್ನೆ ನಡೆದ ಉಮಾಖಾನೊವ್ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್ ಗಳು ಒಂದು ಚಿನ್ನ, ಎರಡು ಬೆಳ್ಳಿ ಪದಕ ಜಯಿಸಿದ್ದಾರೆ. ಮಹಿಳೆಯರ ೭೫ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಸವೀತಿ ಬೂರಾ ಸ್ಥಳೀಯ ಫೇವರಿಟ್ ಅನಾ ಅನ್ಫಿನೊಗೆನೊವ್ ವಿರುದ್ಧ ಗೆದ್ದು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪುರುಷರ ವಿಭಾಗದಲ್ಲಿ ಬ್ರಿಜೇಶ್ ಯಾದವ್ ೮೧ಕೆಜಿ ಮತ್ತು ವಿರೇಂದ್ರ ಕುಮಾರ್ ೯೧ಕೆಜಿ ವಿಭಾಗಗಳ ಫೈನಲ್ ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ಇದಕ್ಕೂ ಮುನ್ನ ಭಾರತ ನಾಲ್ಕು ಕಂಚಿನ ಪದಕ ಗೆದ್ದುಕೊಂಡಿತ್ತು.