೩.ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಗುಂಡಿನ ದಾಳಿಗೆ ಅಸ್ಟಿಸ್ಟೆಂಟ್ ಕಮಾಂಡೆಟ್ ಸೇರಿ ಬಿಎಸ್‌ಎಫ್‌ನ ನಾಲ್ವರು ಸಿಬ್ಬಂದಿ ಹುತ್ಮಾತ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಕಳೆದ ರಾತ್ರಿ ಪಾಕಿಸ್ತಾನ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಹಾಯಕ ಕಮಾಂಡೆಂಟ್ ಸೇರಿ ಗಡಿ ಭದ್ರತಾ ಪಡೆಯ ಐವರು ಯೋಧರು ಹುತಾತ್ಮರಾಗಿದ್ದು, ಇತರ ಐವರು ಜವಾನರು ಗಾಯಗೊಂಡಿದ್ದಾರೆ.

ಕಳೆದ ರಾತ್ರಿ ಸುಮಾರು ೧೦ ಗಂಟೆಗೆ ರಾಮಗಢದ ವಲಯದಲ್ಲಿರುವ ಚಾಮ್ಲಿಯಲ್ ಮತ್ತು ನಾರಾಯಣಪುರ ಬಿಎಸ್ ಎಫ್ ಶಿಬಿರ ಹಾಗೂ ಗಡಿ ಭಾಗವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಅಪ್ರೋಚೊದಿತ ಗುಂಡಿನ ದಾಳಿ ನಡೆಸಿತು ಎಂದು ಬಿಎಸ್‌ಎಫ್ ಮೂಲಗಳು ಆಕಾಶವಾಣಿಗೆ ತಿಳಿಸಿವೆ. ಪಾಕಿಸ್ತಾನ ದಾಳಿಗೆ ಭಾರತ ಸಹ ಪ್ರತ್ಯುತ್ತರ ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.