ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿ: ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ೫-೦ ಗೋಲುಗಳಿಂದ ಭರ್ಜರಿ ಜಯಗಳಿಸಿದ ರಷ್ಯಾ.

ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಷ್ಯಾ, ಸೌದಿ ಅರೇಬಿಯಾ ವಿರುದ್ಧ ೫-೦ ಗೋಲುಗಳಿಂದ ಭರ್ಜರಿ ಜಯಗಳಿಸಿದೆ.

ಪಂದ್ಯ ಆರಂಭವಾದ ಮೊದಲ ೧೩ ನಿಮಿಷಗಳಲ್ಲಿ ರಷ್ಯಾದ ಯುರಿ ಗಾಜಿನ್‌ಸ್ಕೈ ಅದ್ಬುತ ಗೋಲು ಹೊಡೆದು ಆರಂಭಿಕ ಮುನ್ನಡೆ ಗಳಿಸಿಕೊಟ್ಟರು. ದ್ವಿತಿಯಾರ್ಧದಲ್ಲಿ ಬದಲಿ ಆಟಗಾರ ಡೆನಿಸ್ ಚೆರಿಶೋವ್ ಅದ್ಬುತ ಕಾಲ್ಚಳಕ ಪ್ರದರ್ಶಿಸಿ ರಷ್ಯಾಕ್ಕೆ ಮುನ್ನಡೆಗಳಿಸಿಕೊಟ್ಟರು. ೭೧ನೇ ನಿಮಿಷದಲ್ಲಿ        ಆರ್‌ಟೆಂ ಜುಯ್ಬಾ ಮೂರನೇ ಗೋಲು ಗಳಿಸಿದರೆ, ಮತ್ತೆ ಚೆರಿಶೋವ್ ೪ ಹಾಗೂ ಗೋಲೋವಿನ್ ಐದನೇ ಗೋಲು ಸಂಪಾದಿಸಿದರು. ಸೌದಿ ಅರೇಬಿಯಾ ಆಟಗಾರರು ಗೋಲು ಗಳಿಸಲು ಯತ್ನಿಸಿದರಾದರೂ, ರಷ್ಯಾದ ಆಟಗಾರರು ಅದಕ್ಕೆ ಅವಕಾಶ ಕೊಡದೆ ಉತ್ತಮ ಅಟ ಪ್ರದರ್ಶಿಸಿದರು. ಎ ಗುಂಪಿನಲ್ಲಿರುವ ರಷ್ಯಾ, ಈ ಗೆಲುವಿನೊಂದಿಗೆ ೩ ಅಂಕಗಳನ್ನು ಸಂಪಾದಿಸಿದೆ. ಇಂದು ಮೂರು ಪಂದ್ಯಗಳು ನಿಗದಿಯಾಗಿವೆ. ಎ ಗುಂಪಿನಲ್ಲಿ ಈಜಿಪ್ಟ್ ಮತ್ತು ಉರುಗ್ವೆ, ಬಿ ಗುಂಪಿನ ಮೊರಾಕ್ಕೋ ಮತ್ತು ಇರಾನ್ ಹಾಗೂ ಪೋರ್ಚುಗಲ್ ಮತ್ತು ಸ್ಪೇನ್ ಪರಸ್ಪರ ಸೆಣೆಸಲಿವೆ.