ಚೀನಾ ಆಮದು ಮಾಡಿಕೊಳ್ಳುವ ಭಾರತೀಯ ಔಷಧಗಳ ಮೇಲಿನ ತೆರಿಗೆ ಇಳಿಕೆ ಮಾಡಲು ಭಾರತ ಹಾಗೂ ಚೀನಾ ಸಮ್ಮತಿ.

ಭಾರತೀಯ ಔಷಧಗಳಿಗೆ ಸಂಬಂಧಿಸಿದಂತೆ ಆಮದು ದರವನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ಒಪ್ಪಂದ ಮಾಡಿಕೊಂಡಿದೆ.

ಮುಖ್ಯವಾಗಿ ಕ್ಯಾನ್ಸರ್ ಔಷಧಗಳನ್ನು ಕಡಿಮೆ ಮಾಡಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಚೀನಾ ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರ ಹುವಾ ಚುನ್‌ಯಿಂಗ್ ಈ ವಿಷಯವನ್ನು ಬೀಜಿಂಗ್‌ನಲ್ಲಿ ತಿಳಿಸಿದರು.

ಭಾರತ-ಚೀನಾ ಒಪ್ಪಂದದಿಂದಾಗಿ ಈ ಪ್ರಾಂತ್ಯದಲ್ಲಿ ಹಲವು ದೇಶಗಳಿಗೆ ಅನುಕೂಲವಾಗಲಿದೆ. ಏಷ್ಯಾ ಪೆಸಿಫಿಕ್ ವ್ಯಾಪಾರ ಒಪ್ಪಂದದ ಅನ್ವಯ ರಫ್ತು-ಆಮದು ದರಗಳನ್ನು ಕಡಿಮೆ ಮಾಡಲು ಭಾರತ-ಚೀನಾ ನಿರ್ಧರಿಸಿದೆ. ಕಳೆದ ಜುಲೈ ೧ರಿಂದ ಜಾರಿಗೆ ಬರುವಂತೆ ದರ ಕಡಿತ ಮಾಡಲು ಉಭಯ ದೇಶಗಳು ನಿರ್ಣಯ ಕೈಗೊಂಡಿವೆ.