ಫಿಫಾ ವಿಶ್ವಕಪ್ – ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂದು ಫ್ರಾನ್ಸ್ ಅನ್ನು ಎದುರಿಸಲಿರುವ ಬೆಲ್ಜಿಯಂ

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂದು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಬೆಲ್ಜಿಯಂ ಮುಖಾಮುಖಿಯಾಗಲಿದೆ.

ಸೇಂಟ್ ಪೀಟರ‍್ಸ್‌ಬರ್ಗ್‌ನಲ್ಲಿ ಇಂದು ರಾತ್ರಿ ೧೧.೩೦ ಗಂಟೆಗೆ ಪಂದ್ಯ ಆರಂಭವಾಗಲಿದೆ.

ನಾಳೆ ಮಾಸ್ಕೊದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ತಂಡಗಳು ಸೆಣಸಲಿವೆ.

ಸೆಮಿಫೈನಲ್‌ನಲ್ಲಿ ಸೋತ ತಂಡಗಳು ಮೂರನೇ ಸ್ಥಾನಕ್ಕಾಗಿ ಹೋರಾಟ ನಡೆಸಲಿದ್ದು, ಸೆಂಟ್ ಪೀಟರ‍್ಸ್‌ಬರ್ಗ್‌ನಲ್ಲಿ ಶನಿವಾರ ಪಂದ್ಯ ನಡೆಯಲಿದೆ.

ಭಾನುವಾರ ಮಾಸ್ಕೋದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.