ಸಲಿಂಗ ಕಾಮ ಸೆಕ್ಷನ್ ೩೭೭ರ ಕುರಿತ ಈ ಮೊದಲ ದೆಹಲಿ ಹೈಕೋರ್ಟ್‌ನ ಆದೇಶವನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್

ಸಲಿಂಗ ಕಾಮ ಅಪರಾಧವೆಂದು ಹೇಳಿರುವ ಭಾರತೀಯ ದಂಡ ಸಂಹಿತೆ ಸೆಕ್ಷನ್ ೩೭೭ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಆರಂಭಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರ ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಿದ್ದು, ದೆಹಲಿ ಹೈಕೋರ್ಟ್ ೨೦೧೩ರಲ್ಲಿ ನೀಡಿರುವ ಸಲಿಂಗ ಕಾಮ ಅಪರಾಧವಲ್ಲ ಎಂಬ ಆದೇಶವನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸುವುದಾಗಿ ಹೇಳಿದೆ.

ಈ ಪ್ರಕರಣದಲ್ಲಿ ಮುಂಚಿತವಾದ ವಾದಕ್ಕೆ ಸರ್ಕಾರೇತರ ಸಂಸ್ಥೆಯಾದ ನಾಜ್ ಪ್ರತಿಷ್ಠಾನಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವಕಾಶ ಕಲ್ಪಿಸಿದ್ದಾರೆ.  

ಕ್ಯುರೆಟಿವ್ ಅರ್ಜಿಗಳು ಇತಿಮಿತಿಯ ವ್ಯಾಪ್ತಿಯನ್ನು ಹೊಂದಿವೆ.  ಅವುಗಳ ವಿಚಾರಣೆಯನ್ನು ಇತರ ನ್ಯಾಯಪೀಠಗಳಲ್ಲಿ ಕೈಗೆತ್ತಿಕೊಳ್ಳಬಹುದು ಎಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.