ಪಾಕಿಸ್ತಾನದ ಪೇಷಾವರ ಚುನಾವಣಾ ಸಭೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ : ಅವಾಮಿ ನ್ಯಾಷನಲ್ ಪಕ್ಷದ ನಾಯಕ ಹರೂನ್ ಬಿಲೌರ್ ಸೇರಿ ೧೩ ಮಂದಿ ಸಾವು.

ಪಾಕಿಸ್ತಾನದ ಪೇಷಾವರ ನಗರದಲ್ಲಿ ಕಳೆದ ರಾತ್ರಿ ನಡೆದ ಚುನಾವಣಾ ಸಭೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದು  ಅವಾಮಿ ನ್ಯಾಷನಲ್ ಪಕ್ಷದ ನಾಯಕ ಹರೂನ್ ಬಿಲೌರ್ ಸೇರಿದಂತೆ ೧೩ ಮಂದಿ ಮೃತಪಟ್ಟು, ೪೭ ಮಂದಿ ಗಾಯಗೊಂಡಿದ್ದಾರೆ. ಪೇಷಾವರ ನಗರದ ಪಿ ಕೆ  ೭೮ ಕ್ಷೇತ್ರದ ಅಭ್ಯರ್ಥಿಯಾಗಿದ್ದರು ಎಂದು ನಗರ ಪೊಲೀಸ್ ಮುಖ್ಯಸ್ಥ ಕ್ವಾಜಿ ಜಮೀಲ್ ತಿಳಿಸಿದ್ದಾರೆ.  ಬಿಲೌರ್ ಸಭೆಯಲ್ಲಿ ಮಾತನಾಡಲು ವೇದಿಕೆಗೆ ಆಗಮಿಸುತ್ತಿದ್ದಂತೆ ಆತ್ಮಾಹುತಿ ದಾಳಿಕೋರ ಬಾಂಬ್ ಸಿಡಿಸಿಕೊಂಡ ಪರಿಣಾಮ ಸ್ಥಳದಲ್ಲಿ ಬೆಂಕಿ ಹತ್ತಿ ಉರಿಯಲಾರಂಭಿಸಿತು ಎಂದು ಪೊಲೀಸರು ಹೇಳಿದ್ದಾರೆ.