ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ಆರ್ಥಿಕ ಸಹಭಾಗಿತ್ವ ಬಲಯುತ ಹಾಗೂ ವೈವಿಧ್ಯಮಯವಾಗಿದೆ, ದಕ್ಷಿಣ ಕೊರಿಯಾ ಅಧ್ಯಕ್ಷರ ಭೇಟಿ ಹೊಸ ಆಯಾಮ – ರಾಷ್ಟ್ರಪತಿ ರಾಮನಾಥ್ ಕೋವಿಂದ್

ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ಆರ್ಥಿಕ ಸಹಭಾಗಿತ್ವ ಬಲವಾಗಿ ಮತ್ತು ವೈವಿಧ್ಯಮಯವಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.  ದಕ್ಷಿಣ ಕೊರಿಯಾ ಅಧ್ಯಕ್ಷರ ಭಾರತ ಭೇಟಿಯಿಂದ ಹೊಸ ಆಯಾಮ ಸಿಗಲಿದೆ ಎಂದು ಅವರು ಹೇಳಿದರು. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಅವರನ್ನು ನಿನ್ನೆ ರಾಷ್ಟ್ರಪತಿ ಭವನದಲ್ಲಿ  ಸ್ವಾಗತಿಸಿ ಮಾತನಾಡಿದ ರಾಮನಾಥ್ ಕೋವಿಂದ್, ಭಾರತದ ಆಕ್ಟ್ ಈಸ್ಟ್ ನೀತಿದಕ್ಷಿಣ ಕೊರಿಯಾದ ನ್ಯೂ ಸದರ್ನ್ ಕಮ್ಯುನಿಟಿ’  ಜೊತೆಗೆ  ಹೊಂದಿಕೆಯಾಗತ್ತದೆ ಎಂದರು.

ವಸ್ತುಗಳಿಗೆ ನ್ಯಾಯಯುತ ಮಾರುಕಟ್ಟೆ ದರಗಳು ಸಿಗಬೇಕೆಂದು ಬಯಸುತ್ತಿರುವ ಪ್ರಜಾಪ್ರಭುತ್ವ  ರಾಷ್ಟ್ರಗಳಾದ ಭಾರತ ಮತ್ತು ದಕ್ಷಿಣ ಕೊರಿಯಾ ದೇಶಗಳು ಸಮಾನ, ಸ್ಥಿರ ಹಾಗೂ ಭದ್ರತೆಯ ಅಂತಾರಾಷ್ಟ್ರೀಯ ಗಡಿ ಆ ದೇಶಗಳ ಕಡೆಗೆ ಒಟ್ಟಿಗೆ  ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಭಾರತ-ದಕ್ಷಿಣ ಕೊರಿಯಾದ ಆರ್ಥಿಕ ಸಂಬಂಧ ವೃದ್ಧಿಯಾಗುತ್ತಿದ್ದು, ಕಳೆದ ವರ್ಷ ದ್ವಿಪಕ್ಷೀಯ ವ್ಯಾಪಾರದಿಂದ ೨೦ ಶತಕೋಟಿ ಡಾಲರ್‌ಗಿಂತ ಅಧಿಕ ವಹಿವಾಟು ನಡೆದಿದೆ.  ವಾರ್ಷಿಕವಾಗಿ ಶೇಕಡ ೨೫ರಷ್ಟು ಬೆಳವಣಿಗೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.