ಕ್ರಿಕೆಟ್: ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ನಲ್ಲಿಂದು ೩ ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಂದು ಭಾರತ – ಇಂಗ್ಲೆಂಡ್ ಮುಖಾಮುಖಿ.

ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ನಲ್ಲಿಂದು ನಡೆಯಲಿರುವ ೩ ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿಂದು ಭಾರತ – ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ಸಂಜೆ ೫ ಗಂಟೆಗೆ ಪಂದ್ಯ ಆರಂಭವಾಗಲಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಟಿ-೨೦ ಸರಣಿಯನ್ನು ಭಾರತ ೨-೧ರಿಂದ ಗೆದ್ದುಕೊಂಡಿತ್ತು.