ಭಾರತದಲ್ಲಿ ಇನ್ನುಮುಂದೆ ಇಂಟರ್‌ನೆಟ್ ಮುಕ್ತ ಮತ್ತು ನ್ಯಾಯಯುತವಾಗಿರಲಿದೆ – ಕೇಂದ್ರ ಸರ್ಕಾರದಿಂದ ನೆಟ್ ನ್ಯೂಟ್ರ್ಯಾಲಿಟಿ – ತಟಸ್ಥ ಅಂತರ್ಜಾಲ ನೀತಿಗೆ ಅನುಮೋದನೆ.

ಭಾರತದಲ್ಲಿ ಇನ್ನು ಮುಂದೆ ಇಂಟರ್‌ನೆಟ್ ಮುಕ್ತ ಮತ್ತು ನ್ಯಾಯಯುತವಾಗಿರಲಿದೆ. ಕೇಂದ್ರ ಸರ್ಕಾರದಿಂದ ನೆಟ್ ನ್ಯೂಟ್ರ್ಯಾಲಿಟಿ – ತಟಸ್ಥ ಅಂತರ್ಜಾಲ ನೀತಿಗೆ ಅನುಮೋದನೆ ನೀಡಲಾಗಿದೆ.

ದೂರಸಂಪರ್ಕ ಆಯೋಗ ಸೇವಾ ಪೂರೈಕೆದಾರರು ಇನ್ನುಮುಂದೆ ಅಂತರ್ಜಾಲದ ಸೇವೆಗಳನ್ನು ಬ್ಲಾಕ್ ಮಾಡುವುದು, ತಡೆ ಹಿಡಿಯುವುದು ಮತ್ತು ತಾರತಮ್ಯ ಎಸಗುವುದಕ್ಕೆ ತಡೆ ನೀಡಿದೆ. ಇದರಿಂದಾಗಿ ಇನ್ನು ಮುಂದೆ ಅಂತರ್ಜಾಲ ಮುಕ್ತ ಹಾಗೂ ನ್ಯಾಯಯುತವಾಗಿರಲಿದೆ ಎಂದು ನವದೆಹಲಿಯಲ್ಲಿ ನಿನ್ನೆ ಆಯೋಗದ ಅಧ್ಯಕ್ಷ ಅರುಣ ಸುಂದರರಾಜನ್ ಈ ವಿಷಯ ತಿಳಿಸಿದ್ದಾರೆ.

ರಿಮೋಟ್ ಶಸ್ತ್ರಚಿಕಿತ್ಸೆ, ಚಾಲಕ ರಹಿತ ಕಾರುಗಳಂತಹ ಕೆಲವು ಸೇವೆಗಳನ್ನು ಈ ನೀತಿಯಿಂದ ಹೊರಗಿಡಲಾಗಿದೆ. ಅಂತರ್ಜಾಲ ಸೇವಾ ಲಭ್ಯತೆಯಲ್ಲಿ ಯಾವುದೇ ತಾರತಮ್ಯವಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.