ಒರಿಸ್ಸಾದಲ್ಲಿ ಸುಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಆರಂಭ; ರಾಷ್ಟ್ರಪತಿ, ಪ್ರಧಾನಮಂತ್ರಿ ಅವರಿಂದ ಶುಭಾಶಯ.

ಒಡಿಶಾದ ಸುಪ್ರಸಿದ್ಧ ಪುರಿ ಜಗನ್ನಾಥ್ ರಥೋತ್ಸವ ಇಂದಿನಿಂದ ಆರಂಭವಾಯಿತು. 9 ದಿನಗಳ ಕಾಲ ನಡೆಯುವ ಲಾರ್ಡ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿ ಅವರ ರಥೋತ್ಸವ ಭಾರತೀಯ ಕಾಲಮಾನ ಪ್ರಕಾರ ಇಂದು ಬೆಳಗಿನ ಜಾವ 4 ಗಂಟೆಗೆ ಚಾಲನೆ ದೊರೆಯಿತು.  10 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತಾಧಿಗಳು ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.  ಪೂರ್ವ ಕರಾವಳಿ ರೇಲ್ವೆ ವಿಭಾಗ ಭಕ್ತಾಧಿಗಳಿಗಾಗಿ 120ಕ್ಕೂ ಹೆಚ್ಚು ವಿಶೇಷ ರೈಲುಗಳು ಸಂಚರಿಸಲಿದ್ದು, ಅಗತ್ಯ ಎಲ್ಲಾ ಕ್ರಮಗಳನ್ನು ರೈಲ್ವೆ ವಿಭಾಗ ಕೈಗೊಂಡಿದೆ.