ಪೂರ್ವ ಉತ್ತರ ಪ್ರದೇಶ ರಾಜ್ಯಕ್ಕೆ 2 ದಿನ ಪ್ರವಾಸ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ; ಅಜ್ಜಂಘಡ, ವಾರಣಾಸಿ ಮತ್ತು ಮಿರ್ಜಾಪುರ ಜಿಲ್ಲೆಗಳ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ.

ಪ್ರಧಾನಮಂತ್ರಿ ನರೇಂದ್ರಮೋದಿ ಇಂದಿನಿಂದÀ 2 ದಿನಗಳ ಕಾಲ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಇಂದು ಅವರು  ವಾರಣಾಸಿ, ಅಜಂಘಡ ಮತ್ತು ಮಿರ್ಜಾಪುರ ಜಿಲ್ಲೆಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿ ಇಂದು ಅಜಂಘಡದಲ್ಲಿ 350 ಕಿಲೋ ಮೀಟರ್ ಉದ್ದದ ಮಹತ್ವಾಕಾಂಕ್ಷೆಯ ಪೂರ್ವಾಂಚಲ್ ಎಕ್ಸ್‍ಪ್ರೆಸ್ ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ರಾಜ್ಯದ ರಾಜಧಾನಿ ಲಕ್ನೌ ನಗರಕ್ಕೆ ಗಾಜಿûೀಪುರ ಜಿಲ್ಲೆಯಿಂದ ಸಂಪರ್ಕ ಸಾಧ್ಯವಾಗಲಿದೆ. ಪ್ರತ್ಯೇಕ ಸಂಪರ್ಕ ಮಾರ್ಗದ ಮೂಲಕ ವಾರಾಣಸಿ ನಗರಕ್ಕೂ ಇದರಿಂದ ಸಂಪರ್ಕ ಸಾಧ್ಯವಾಗಲಿದೆ. ಪ್ರಧಾನಮಂತ್ರಿಗಳು ಅಝಂಗಢÀದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅವರು ವಾರಾಣಸಿ ನಗರದಲ್ಲಿ ಅಡುಗೆ ಅನಿಲ ವಿತರಣೆ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ವಾರಾಣಸಿ-ಬಲ್ಲಿಯಾ ನಡುವಣ ಎಮು ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದಲ್ಲದೇ ಅವರು, ಸ್ಮಾರ್ಟ್ ಸಿಟಿ ಅಭಿಯಾನ, ನಮಾಮಿ ಗಂಗೆ ಅಭಿಯಾನ ಸಂಬಂಧಿತ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿದ್ದು, ವಾರಾಣಸಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಇಂದು ರಾತ್ರಿ ನರೇಂದ್ರ ಮೋದಿ ಅವರು, ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲೇ ತಂಗಲಿದ್ದು, ನಾಳೆ ಮಿರ್ಜಾಪುರಕ್ಕೆ ಭೇಟಿ ನೀಡುತ್ತಾರೆ.

ಅಲ್ಲಿ ಬನ್‍ಸಾಗರ್ ಕಾಲುವೆ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ. ಮಿರ್ಜಾಪುರ್ ಮತ್ತು ಅಲಹಾಬಾದ್ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳಿಗೆ ಬನ್‍ಸಾಗರ್ ಕಾಲುವೆ ಯೋಜನೆಯಿಂದ ಭಾರಿ ಉತ್ತೇಜನ ದೊರೆಯಲಿದೆ. ಇದೇ ವೇಳೆ ಮಿರ್ಜಾಪುರ್ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಸಮಾರಂಭ ನೆರವೇರಿಸಲಿದ್ದು, ಆ ಬಳಿಕ ವಾರಣಾಸಿ ಮತ್ತು ಮಿರ್ಜಾಪುರ್ ಸಂಪರ್ಕ ಕಲ್ಪಿಸುವ ಚುನಾರ್, ಬಲುಘಾಟ್‍ನ ಗಂಗಾನದಿ ಸೇತುವೆ ಬಳಿ ರಾಜ್ಯ ಸರ್ಕಾರದ 108ನೇ ಜನೌಷಧಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.