ಫಿಫಾ ವಿಶ್ವಕಪ್‌ನಲ್ಲಿ ೩ನೇ ಸ್ಥಾನಕ್ಕಾಗಿ ಸನ್‌ಪೀಟರ‍್ಸ್ ಬರ್ಗ್‌ನಲ್ಲಿಂದು ಇಂಗ್ಲೆಂಡ್ ಮತ್ತು ಬೆಲ್ಜಿಯಂ ನಡುವೆ ಹಣಾಹಣಿ.

ಫಿಫಾ ವಿಶ್ವ ಕಪ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ಇಂದು ಸೈಂಟ್ ಪೀಟರ್‌ಬರ್ಗ್‌ನಲ್ಲಿ ಇಂಗ್ಲೆಂಡ್ ಮತ್ತು ಬೆಲ್ಜಿಯಂ ಸೆಣಸಲಿವೆ. ಇಂದು ಸಂಜೆ ೭.೩೦ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಮಾಸ್ಕೋದಲ್ಲಿ ನಡೆದ ಸೆಮಿಫೈನಲ್ಸ್‌ನಲ್ಲಿ ಕ್ರೊವೇಷಿಯಾ ತಂಡ ೨-೧ ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು.
ಸೈಂಟ್‌ಪೀಟರ್‌ಬರ್ಗ್‌ನಲ್ಲಿ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಫ್ರಾನ್ಸ್ ೧-೦ ಗೋಲುನಿಂದ ಬೆಲ್ಜಿಯಂ ತಂಡವನ್ನು ಸೋಲಿಸಿತ್ತು. ನಾಳೆ ರಾತ್ರಿ ೮.೩೦ಕ್ಕೆ ಫ್ರಾನ್ಸ್ ಮತ್ತು ಕ್ರೊವೇಷಿಯಾ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.