ಭಾರತದ ಅಭಿವೃದ್ಧಿಯ ಭರವಸೆ

2017 ರ ವಿಶ್ವ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಭಾರತವು ಆರನೆಯ ಅತಿ ದೊಡ್ಡ ಆರ್ಥಿಕತೆಯಾಗಿದೆ. ಯುಎಸ್, ಚೀನಾ, ಜಪಾನ್, ಜರ್ಮನಿ ಮತ್ತು ಯುಕೆ ನಂತರದ ಸ್ಥಾನದಲ್ಲಿ.ಭಾರತವಿದ್ದು ಫ್ರಾನ್ಸ್ಅನ್ನು ಏಳನೇ ಸ್ಥಾನಕ್ಕೆ ತಳ್ಳಿದೆ. ಫ್ರಾನ್ಸ್ $ 2.582 ಲಕ್ಷಕೋಟಿಗಳ ಅರ್ಥಿಕತೆ ಹೊಂದಿದ್ದರೆ ಭಾರತದ ಜಿಡಿಪಿ ಯುಎಸ್ $ 2.597 ಟ್ರಿಲಿಯನ್ ಆಗಿದೆ.

ಯುನೈಟೆಡ್ ಕಿಂಗ್ಡಮ್, ಐದನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದ್ದು 2.62 ಟ್ರಿಲಿಯನ್ ಯುಎಸ್ ಡಾಲರ್ ಗಳ ಜಿಡಿಪಿಯನ್ನು ಹೊಂದಿದೆ. ಇದು ಭಾರತಕ್ಕಿಂತ 25 ಶತಕೋಟಿ ಅಮೆರಿಕನ್ ಡಾಲರ್ ಹೆಚ್ಚು.  ‘ಬ್ರೆಕ್ಸಿಟ್’  ನಿಂದಾಗಿ ಭಾರತವು ಕೆಲವೇ ತ್ರೈಮಾಸಿಕಗಳಲ್ಲಿ ಯುಕೆಯನ್ನು ಹಿಂದಿಕ್ಕಬಹುದು ಮತ್ತು ಭವಿಷ್ಯದಲ್ಲಿ ವಿಶ್ವದಲ್ಲೇ ಐದನೆಯ ದೊಡ್ಡ ಆರ್ಥಿಕತೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತವು ಜರ್ಮನಿ ಮತ್ತು ಜಪಾನ್ ಗಳನ್ನು 2028 ರ ಹೊತ್ತಿಗೆ ಜಿಡಿಪಿಯಲ್ಲಿ ಹಿಂದಿಕ್ಕಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ಒಂದು ದಶಕದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವು ರೂಪುಗೊಂಡು  “$ 6 ಟ್ರಿಲಿಯನ್ ಆರ್ಥಿಕತೆ” ಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಲಂಡನ್, ಎಕನಾಮಿಕ್ಸ್ ಮತ್ತು ಬ್ಯುಸಿನೆಸ್ ರಿಸರ್ಚ್ ಸೆಂಟರ್ ಪ್ರಕಟಿಸಿದ ವಿಶ್ವ ಆರ್ಥಿಕ ಲೀಗ್ ಟೇಬಲ್ (WELT) 2018  ಯುಕೆ ಮತ್ತು ಫ್ರಾನ್ಸ್ ಅನ್ನು ಹಿಂದಿಕ್ಕಿ ವಿಶ್ವದ “ಐದನೆಯ ಅತಿದೊಡ್ಡ ಆರ್ಥಿಕತೆ” ಯಾಗಿ ಭಾರತವು ರೂಪುಗೊಳ್ಳಲಿದೆ ಎಂದು ಎಂದು ಭವಿಷ್ಯ ನುಡಿದಿದೆ. ಅಗ್ರ ಹತ್ತರಲ್ಲಿ ಇರುವ ಇತರ ಮೂರು ದೇಶಗಳೆಂದರೆ  ಬ್ರೆಜಿಲ್, ಇಟಲಿ ಮತ್ತು ಕೆನಡಾ.

ಕಳೆದ ತಿಂಗಳು ವಿಶ್ವ ಬ್ಯಾಂಕ್ ಪ್ರಕಟಿಸಿದ “ಜಾಗತಿಕ ಅರ್ಥಶಾಸ್ತ್ರ ಭವಿಷ್ಯ” ವರದಿಯು ಭಾರತ 2018 ರಲ್ಲಿ 7.3 ಮತ್ತು 2019 ಮತ್ತು 2020 ರಲ್ಲಿ 7.5 ಕ್ಕೆ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದೆ. ಜಿಡಿಪಿಬೆಳವಣಿಗೆ ದರ 2016ರಲ್ಲಿ ಶೇ. 7.1, ಮತ್ತು 2017 ರಲ್ಲಿ ಶೇ 6.7 ಮಾತ್ರವಿದ್ದರು ಇದು ಭರವಸೆಯ ಮತ್ತು ಬೆಳವಣಿಗೆಯ ಅಭಿವೃದ್ಧಿ ದರವಾಗಿದೆ.

 2015 ರಲ್ಲಿ ಭಾರತದ ಬೆಳವಣಿಗೆ ದರ ಶೇ.  8.2 ಇತ್ತು ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ಸೂಚಿಸಿರುವುದು ಕುತೂಹಲಕಾರಿಯಾಗಿದೆ. ಭಾರತವು ಹಣಕಾಸಿನ ಮತ್ತು ವಿತ್ತೀಯ ನೀತಿಗಳನ್ನು ಬಲಪಡಿಸಬೇಕಾಗಿದೆ- ವಿಶೇಷವಾಗಿ ಸಾರ್ವಜನಿಕ ಹೂಡಿಕೆಯು – ಮಾರುಕಟ್ಟೆಯಲ್ಲಿನ ಆರ್ಥಿಕ ಸ್ಥಿರತೆಯೊಂದಿಗೆ ಶೇ. 8 ಬೆಳವಣಿಗೆಗೆ ಮರಳಲು ಪ್ರಯತ್ನಿಸಬೇಕಿದೆ.  ಐಬಿಸಿ (ದಿವಾಳಿತನ ಸಂಹಿತೆ) ಮತ್ತು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಯೋಜನೆಗಳಿಗೆ ನೀಡಿದ ಚಾಲನೆ ದೀರ್ಘಾವಧಿಯಲ್ಲಿ ಭಾರತದಲ್ಲಿ ” ಸುಲಭ ವ್ಯಾಪಾರ” ದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಐಎಂಎಫ್ ವರದಿಯ ಪ್ರಕಾರ ‘ವರ್ಲ್ಡ್ ಎಕನಾಮಿಕ್ ಔಟ್ಲುಕ್’ ಭಾರತದ ಬೆಳವಣಿಗೆಯ ಪಥವನ್ನು ಅಂದಾಜಿಸಿದೆ. 2018 ರಲ್ಲಿ ಭಾರತವು 7.8 ಶೇಕಡ ಮತ್ತು 2019 ರಲ್ಲಿ 7.8 ಶೇಕಡಾ ಬೆಳೆಯಲಿದೆ ಮತ್ತು ಚೀನಾ ಜಿಡಿಪಿ 2018 ರಲ್ಲಿ 6.6 ಕ್ಕೆ ಮತ್ತು 2019 ರಲ್ಲಿ 6.4 ಶೇಕಡಾ ಬೆಳೆಯಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಜಿಡಿಪಿ 2018-19ರಲ್ಲಿ ಶೇ 7.5 ರಷ್ಟು ಬೆಳೆಯುವ ಮುನ್ಸೂಚಣೆಗಳಿವೆ.  ಉತ್ತಮ ಬೆಳವಣಿಗೆಯ ದರವನ್ನು ಉಳಿಸಿಕೊಳ್ಳಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸರಳಗೊಳಿಸುವ ಮತ್ತು ಸುಗಮಗೊಳಿಸಲು ಈ ವರದಿಗಳು ಸರ್ಕಾರಕ್ಕೆ ಸಲಹೆ ನೀಡಿದೆ. ಅವಳಿ ಬ್ಯಾಲೆನ್ಸ್ ಶೀಟ್ ಬಿಕ್ಕಟ್ಟು-ಸಾಂಸ್ಥಿಕ ಸಾಲ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಸಾಲ (ಎನ್ಪಿಎ), ಭೂಮಿ ಮತ್ತು ಕಾರ್ಮಿಕ ಸುಧಾರಣೆಗಳ ಪ್ರಕ್ರಿಯೆಯನ್ನು ಉತ್ತಮ ಅಭಿವೃದ್ಧಿಗಾಗಿ ರೂಪಿಸಬೇಕು ಎಂದು ಸಲಹೆ ನೀಡಲಾಗಿದೆ  

ಭಾರತ ವೇಗವಾಗಿ ಬೆಳೆಯುತ್ತಿದೆಯಾದರೂ, ಆದಾಯ ಅಸಮಾನತೆಯ ಸಮಸ್ಯೆಗಳಿಗೆ ಗಮನ ಹರಿಸಬೇಕು. ತಲಾ ಆದಾಯದ ವಿಷಯದಲ್ಲಿ ಭಾರತವು 126 ನೇ ಸ್ಥಾನದಲ್ಲಿದೆ, ಇತ್ತೀಚಿನ IMF ಡೇಟಾಪ್ರಕಾರ. ವಾಸ್ತವವಾಗಿ ಭಾರತವು 1.34 ಶತಕೋಟಿ ಜನಸಂಖ್ಯೆಯನ್ನು ಹೊಂದಿದೆ. 2024 ರ ಹೊತ್ತಿಗೆ ಚೀನಾವನ್ನು ಮೀರುವ ಭಾರತದ ಜನಸಂಖ್ಯೆಯೊಂದಿಗೆ, “ಹೆಚ್ಚಿನ ಬೆಳವಣಿಗೆ” ಪಥವನ್ನು ಸಾಧಿಸಲುಭಾರತದ ರಾಜ್ಯಗಳಲ್ಲಿ ಆರ್ಥಿಕ ಒಮ್ಮುಖವಾಗಬೇಕಾಗಿದೆ.

ಅನೇಕ ಸವಾಲುಗಳ ಹೊರತಾಗಿಯೂ, ಜಾಗತಿಕ ಆರ್ಥಿಕ ಬೆಳವಣಿಗೆಯು 2018 ಕ್ಕೆ 3.1 ಶೇಕಡ ಮಾತ್ರ ಇದ್ದಾಗಲೂ ಭಾರತ ಸುಮಾರು ಶೇ. 7 ರ ಪ್ರಗತಿ ಸಾಧಿಸುತ್ತಿರುವುದು ಹೃದ್ಯವಾಗಿದೆ. ವಿಶ್ವಬ್ಯಾಂಕ್ ದೃಢವಾದ ಆರ್ಥಿಕ ಬೆಳವಣಿಗೆಯು ವಿಪರೀತ ಬಡತನವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನೀತಿ ನಿರೂಪಕರು ಉತ್ಪಾದಕತೆ ಹೆಚ್ಚಿಸಲು ಮತ್ತು ಕಾರ್ಮಿಕ ಬಲದ ಭಾಗವಹಿಸುವಿಕೆಯಮೇಲೆ ಗಮನ ಕೇಂದ್ರೀಕರಿಸಬೇಕು.

ಜಾಗತಿಕ ಆರ್ಥಿಕ ದೃಷ್ಟಿಕೋನವು ದೃಢವಾಗಿ ಕಂಡುಬಂದರೂ, ಗಣನೀಯ “ತೊಂದರೆಯ ಅಪಾಯಗಳು” ಇವೆ. ಅಂತರರಾಷ್ಟ್ರೀಯ ವ್ಯಾಪಾರ ರಕ್ಷಣಾಯತ್ತ ಮಗ್ಗಲು ಬದಲಾಯಿಸುತ್ತಿರುವುದು, ಜಾಗತೀಕರಣದಿಂದ ನಿರ್ಗಮನ, ಜಾಗತಿಕ ಆರ್ಥಿಕ ಮಾರುಕಟ್ಟೆಯ ಚಂಚಲತೆ ಮತ್ತು ಹೆಚ್ಚುತ್ತಿರುವ ಸಾಂಸ್ಥಿಕ ಸಾಲಗಳು ಚಿಂತೆಯ ವಿಷಯಗಳಾಗಿವೆ.

ಬರಹ: ಡಾ. ಲೇಖಾ ಚಕ್ರವರ್ತಿ, ಅಸೋಸಿಯೆಟ್ ಫ್ರೊಫೆಸರ್

ಸಾರ್ವಜನಿಕ ಹಣಕಾಸು ಮತ್ತು ನೀತಿಯ ರಾಷ್ಟ್ರೀಯ ಸಂಸ್ಥೆ & ಸಂಶೋಧನಾ ಸಹಾಯಕಿ, ದಿ ಲೆವಿ ಇಕಾನಾಮಿಕ್ ಇನ್ಸಿಟ್ಯೂಟ್ ಅಫ್ ಭಾರ್ಡ್ ಕಾಲೇಜ್, ನ್ಯೂ ಯಾರ್ಕ್