ಲಾಡ್ಸ್ನರಲ್ಲಿ ಇಂದು ನಡೆಯಲಿರುವ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ- ಇಂಗ್ಲೆಂಡ್ ಹಣಾಹಣಿ.

ಇಂದು ಲಾಡ್ರ್ಸ್‍ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಕ್ರಿಕೆಟ್ ಸರಣಿಯ 2ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಪಂದ್ಯ ಮಧ್ಯಾಹ್ನ 3.30 ಪ್ರಾರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದರೆ ಸತತ 10ನೇ ಏಕ ದಿನ ಸರಣಿ ಜಯಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ನಾಟಿಂಗ್‍ಹ್ಯಾಮ್‍ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‍ಗಳಿಂದ ಇಂಗ್ಲೆಂಡ್ ವಿರುದ್ಧ ಜಯಗಳಿಸಿತ್ತು. ಚಿನ್ನಮನ್ ಕುಲ್‍ದೀಪ್ ಯಾದವ್ 6 ವಿಕೆಟ್ ಹಾಗೂ ರೋಹಿತ್ ಶರ್ಮಾ ರವರ ಅಜೇಯ 137 ರನ್‍ಗಳು ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಲು ಸಹಕಾರಿಯಾಯಿತು. ಭಾರತ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.  ಕುಲ್‍ದೀಪ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯ 17 ರಂದು ಮಂಗಳವಾರ ಸಂಜೆ 5 ಗಂಟೆಗೆ ಲೀಡ್ಸ್‍ನಲ್ಲಿ ನಡೆಯಲಿದೆ.