ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮನಾಮಕ್ಕೆ ೨ ದಿನಗಳ ಪ್ರವಾಸ; ಬಹರೈನ್ ವಿದೇಶಾಂಗ ಸಚಿವರೊಂದಿಗೆ ೨ನೇ ಉನ್ನತ ಜಂಟಿ ಆಯೋಗದ ಸಭೆ

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದಿನಿಂದ ಎರಡು ದಿನಗಳ ಕಾಲ ಮನಾಮಕ್ಕೆ ಭೇಟಿ ನೀಡಲಿದ್ದು, ಬಹರೈನ್‌ನ ವಿದೇಶಾಂಗ ಸಚಿವರೊಂದಿಗೆ ಎರಡನೇ ಉನ್ನತ ಜಂಟಿ ಆಯೋಗದ ಸಹ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರವಾಸದ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಅವರು ನ್ಯೂ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿ, ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾತ್ರವಲ್ಲ ಅಲ್ಲಿನ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ಸಹಕಾರಕ್ಕೆ ಹೊಸ ಅವಕಾಶಗಳನ್ನು ಒದಗಿಸುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.