అమెరికాతో బలోపేతమవుతున్న భారత్ సంబంధాలు

ಅಮೆರಿಕದೊಂದಿಗೆ ಭಾರತದ ಸಂಬಂಧ ಬಲಗೊಲ್ಳುತ್ತಿದೆ. ವಿದೇಶಾಂಗ ಕಾರ್ಯನೀತಿ ಮುಖ್ಯಸ್ಥರು ಮತ್ತು ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ರಕ್ಷಣಾ ಸಂಸ್ಥೆಗಳ ಇಲಾಖೆಯಮುಖ್ಯಸ್ಥರ ನಡುವೆ ಸಂವಾದ ನಡೆಸುವ ಸಲುವಾಗಿ ಹೊಸದಿಲ್ಲಿಯ ಸಿದ್ಧತೆಯ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ವಾಷಿಂಗ್ಟನ್ ಗೆ ತೆರಳಿದ್ದಾರೆ.

ಸೆಪ್ಟೆಂಬರ್ 2 ರಂದು 2 + 2 ಇಂಡೋ-ಅಮೆರಿಕ ಮಾತುಕತೆ ನವದೆಹಲಿಯಲ್ಲಿ ನಡೆಯಲಿದೆ. ಅಮೆರಿಕದ ಕಾರ್ಯದರ್ಶಿ ಮೈಕ್ ಪೊಂಪೆಯೊ ಮತ್ತು ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮಾಟಿಸ್ ಮತ್ತು ಭಾರತೀಯ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ನೇರ ಮಾತುಕತೆ ನಡೆಸಲಿದ್ದಾರೆ. ಎರಡು ದೇಶಗಳ ನಡುವಿನದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಗಳ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಆಯಾಮಗಳನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಈ ಸಭೆ ನಡೆಯುತ್ತಿದೆ.

ವಾಷಿಂಗ್ಟನ್ ಅಥವಾ ನವದೆಹಲಿಯಲ್ಲಿ ಅಧಿಕಾರಸ್ತರ ಬದಲಾವಣೆಯಾಗುವುದರ ಜತೆಗೆ ಕಾರ್ಯತಂತ್ರದ ಸಂಭಾಷಣೆಯ ವಿಧಾನ ಮತ್ತು ರಚನೆಯಲ್ಲಿ ಕೂಡ ಬದಲಾವಣೆಗಳಾಗುತ್ತವೆ. ಆದರೆವಸ್ತು ವಿಷಯ ಯಾವಾಗಲೂ ಒಂದೇ ಆಗಿರುತ್ತದೆ. ರಾಷ್ಟ್ರೀಯ ಭದ್ರತಾ ಸಮಸ್ಯೆಗಳು ಸಂಕೀರ್ಣವಾಗಿದ್ದು ಮತ್ತು ಪರಸ್ಪರ ಸಂಬಂಧ ಹೊಂದಿದ್ದು, ಭಾರತ ಮತ್ತು ಅಮೆರಿಕಾ ಸಂಯುಕ್ತಸಂಸ್ಥಾನಗಳ ನಡುವಿನ ರಾಜತಾಂತ್ರಿಕ ಮತ್ತು ರಕ್ಷಣಾ ಸಂಭಾಷಣೆಗಳನ್ನು ಏಕಕಾಲದಲ್ಲಿ ನಡೆಸಲು ಇದು ಪೂರಕವಾಗಿದೆ.

ಆದಾಗ್ಯೂ, 2 + 2 ಸಂವಾದಗಳು ಸರಳವಾಗಿಲ್ಲ. ಏಕೆಂದರೆ ಭಾರತದ ಮತ್ತು ಅಮೆರಿಕದ ಕಾರ್ಯತಂತ್ರದ ಆಸಕ್ತಿಗಳು ಬೇರೆ ಬೇರೆಯದೇ ಆಗಿರುತ್ತವೆ.  ಕೇವಲ ರಚನಾತ್ಮಕ ಮತ್ತು ಸಮಗ್ರಸಂಭಾಷಣೆ ಮಾತ್ರ ವ್ಯತ್ಯಾಸಗಳನ್ನು ಕಡಿಮೆ ಮಾಡಬಹುದು ಮತ್ತು ಸಂಬಂಧಗಳು ಹಾಳಾಗದಂತೆ ನೋಡಿಕೊಳ್ಳಲು ನೆರವಾಗುತ್ತವೆ.

ಸಾಕಷ್ಟು ರಾಜತಾಂತ್ರಿಕ ಕಾರ್ಯಕ್ರಮಗಳ ಕೊರತೆಯಿಂದಾಗಿ ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವಿನ ವ್ಯತ್ಯಾಸ ಮೂಡಲು ಕಾರಣವಾಗಿತ್ತು. ಎರಡೂ ದೇಶಗಳ ನಡುವಿನರಕ್ಷಣಾ ಮತ್ತು ಭದ್ರತಾ ರಂಗಗಳಲ್ಲಿ ಸಹಕಾರ ಸುಧಾರಿಸುವ ನಿಟ್ಟಿನಲ್ಲಿ ಈಗ ಕೆಲಸ ನಡೆಯುತ್ತಿವೆ. ಅದೇನೆ ಇದ್ದರೂ ಯಾವುದೇ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು 2 + 2 ಸಂವಾದ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

ವಾಸ್ತವವಾಗಿ, ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವಿನ ದ್ವಿಪಕ್ಷೀಯ ವ್ಯತ್ಯಾಸಗಳು ಗಂಭೀರವಾಗಿವೆ. ಇದನ್ನು ಒಂದು ಸಂಭಾಷಣೆಯಕಾರ್ಯವಿಧಾನದ ಮೂಲಕ ಮಾತ್ರ ಪರಿಹರಿಸಬಹುದು. ಇವುಗಳಲ್ಲಿ ಮೊದಲ ನಿರ್ಣಾಯಕ ವಿಷಯವೆಂದರೆ ಟ್ರಂಪ್ ಆಡಳಿತದ ಇರಾನ್ ನೀತಿ. ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹೊರನಡೆಯುವ ಜತೆಗೆ ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಇರಾನ್ ಇಂಧನ ಆಮದು ಮಾಡಿಕೊಳ್ಳುವ ಭಾರತದ ಮೂರನೇ ಅತಿದೊಡ್ಡ ಮೂಲವಾಗಿದೆ. ಅಫ್ಘಾನಿಸ್ತಾನ ಮತ್ತುಮಧ್ಯ ಏಷ್ಯಾದ ಮಾರುಕಟ್ಟೆಗಳಿಗೆ ಭಾರತವನ್ನು ಪ್ರವೇಶಿಸಲು ಅವಕಾಶ ಕಲ್ಪಿಸುವ ಉತ್ತರ-ದಕ್ಷಿಣ ಕಾರಿಡಾರ್ ಸ್ಥಾಪನೆಗೆ ಭಾರತವು ನೆರವಾಗಲಿದೆ. ಇರಾನಿನ ಚಬಹಾರ್ ಬಂದರನ್ನುಅಭಿವೃದ್ಧಿಪಡಿಸುವಲ್ಲಿ ಭಾರತದ ಬಂಡವಾಳವು ವಿಳಂಬವಾಗಲು ಎಂದು ಅಮೆರಿಕ ನಿರ್ಬಂಧಗಳೇ ಕಾರಣವಾಗಬಲ್ಲವು0

ಎರಡನೇ ವಿಷಯವೆಂದರೆ ರಶಿಯಾ ಕಡೆಗೆ ಟ್ರಂಪ್ ಆಡಳಿತದ ನೀತಿ. ಅಮೆರಿಕ ಖಂಡಿತವಾಗಿ ತನ್ನ ರಕ್ಷಣಾ ಮಾರುಕಟ್ಟೆಯನ್ನು ಭಾರತದಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿದೆ, ಇದು ಭಾರತಕ್ಕೆ ಸ್ವಾಗತಾರ್ಹವೆನಿಸದ ವಿಷಯವೇನಲ್ಲ. ಕಳೆದ ದಶಕದಲ್ಲಿ ಭಾರತ ಸುಮಾರು $ 15 ಟ್ರಿಲಿಯನ್ ಮೌಲ್ಯದ ಅಮೇರಿಕನ್ ರಕ್ಷಣಾ ಸಾಧನಗಳನ್ನು ಖರೀದಿಸಿದೆ. ಆದರೆ, ನಿರ್ಬಂಧಗಳನ್ನು ಮತ್ತು ಇತರ ಕ್ರಮಗಳ ಮೂಲಕ ಲಾಭದಾಯಕ ರಕ್ಷಣಾ ಮಾರುಕಟ್ಟೆಯಲ್ಲಿ ಪ್ರವೇಶಿಸದಂತೆ ರಶಿಯಾವನ್ನು ತಡೆಗಟ್ಟುವ ವಾಷಿಂಗ್ಟನ್ ನ ಪ್ರಯತ್ನವು ಭಾರತದ ಅತೃಪ್ತಿಗೆ ಕಾರಣವಾಗಿದೆ. ಅಮೆರಿಕದ ಏಕಪಕ್ಷೀಯ ಕ್ರಮಗಳು ಕಾರ್ಯತಂತ್ರದ ಪಾಲುದಾರಿಕೆಯ ಮೃದು ಅನುಷ್ಠಾನದಲ್ಲಿ ಅಪನಂಬಿಕೆ ಮತ್ತು ತಡೆಗಳನ್ನು ಹೆಚ್ಚಿಸಬಹುದು..

ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇರುವ ವ್ಯತ್ಯಾಸಗಳು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಂಘರ್ಷವನ್ನು ತಡೆಗಟ್ಟುವುದು ಭಾರತದ ಆದ್ಯತೆ. ಭಾರತೀಯ ಸರ್ಕಾರವು ಇಂಡೋ-ಪೆಸಿಫಿಕ್ಪರಿಕಲ್ಪನೆಯನ್ನು ಒಪ್ಪಿಕೊಂಡಿದ್ದರೂ, ಅದು ಒಂದು ತಂತ್ರ ಎಂದು ಪರಿಗಣಿಸುವುದಿಲ್ಲ. ತೆರೆದ, ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಕಲ್ಪನೆಯನ್ನು ಭಾರತ ಬೆಂಬಲಿಸುತ್ತದೆ. ಏಷ್ಯಾದ-ಆಫ್ರಿಕಾದಬೆಳವಣಿಗೆಯ ಕಾರಿಡಾರ್ ಕಲ್ಪನೆಯೊಂದಿಗೆ ಭಾರತವು ಹೆಚ್ಚು ಮುಂದುವರಿದಿದೆ. ಮತ್ತು ಜಪಾನ್ ಜೊತೆ ಅದನ್ನು ಸಾಧಿಸಲು ಕೆಲಸ ಮಾಡುತ್ತಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ಮಿಲಿಟರಿ ಶಕ್ತಿಗಳನ್ನು ಹೊಂದಿದ್ದು, ಸಿನೋ-ಇಂಡಿಯನ್ ಗಡಿ ಮತ್ತು ಒನ್ ಬೆಲ್ಟ್ ಒನ್ ರೋಡ್ ಯೋಜನೆ ಅನುಷ್ಠಾನಗೊಳಿಸುವುದರಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಭಾರತಕ್ಕೆ ಸಮ್ಮತಿಯಿಲ್ಲ. ಟ್ರಂಪ್ ಆಡಳಿತದ ಮಾದರಿಯಲ್ಲಿ ಇದನ್ನು ಬಗೆಹರಿಸಲು ಭಾರತಕ್ಕೆ ಇಷ್ಟವಿಲ್ಲ.

ಈ ನಿಟ್ಟಿನಲ್ಲಿ 2 + 2 ಸಂಭಾಷಣೆ ಖಂಡಿತವಾಗಿಯೂ ಸಮಸ್ಯೆಗಳನ್ನು ತೆರವುಗೊಳಿಸಲು, ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು ಮತ್ತು ಯಶಸ್ಸಿನ ಪಾಲುದಾರಿಕೆ ಮೂಲಕ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಯುದ್ಧತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಲಿದೆ.

రచన: ప్రొ. చింతామణి మహాపాత్ర, ప్రొ. వైస్ ఛాన్సలర్, జెఎన్‌యు