ಎರಡು ದಿನಗಳ ರಷ್ಯಾ ಪ್ರವಾಸ ಆರಂಭಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ; ೨೩ನೇ ಭಾರತ-ರಷ್ಯಾ ಅಂತರ್ ಸಚಿವಾಲಯ ಆಯೋಗ, ತಾಂತ್ರಿಕ – ಆರ್ಥಿಕ ಸಹಕಾರ ಸಭೆಯಲ್ಲಿ ಪಾಲ್ಗೊಳ್ಳಲು ಮಾಸ್ಕೋಗೆ ಪ್ರಯಾಣ

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮ ಸ್ವರಾಜ್ ತಮ್ಮ ೨ ದಿನಗಳ ರಷ್ಯಾ ಪ್ರವಾಸ ಆರಂಭಿಸಿದ್ದಾರೆ. ಮಾಸ್ಕೋದಲ್ಲಿ ಅವರು, ೨೩ ನೇ ಭಾರತ ರಷ್ಯಾ ಅಂತರ ಸಚಿವಾಲಯ ಆಯೋಗ ಹಾಗೂ ಆರ್ಥಿಕ ಸಹಕಾರ ಸಭೆಯಲ್ಲಿ ರಷ್ಯಾ ಒಕ್ಕೂಟದ ಉಪ ಪ್ರಧಾನಿ ಯೂರಿ ಬೋರಿಸೊವ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಭಾರತ-ರಷ್ಯಾ ನಡುವೆ ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಹಾಗೂ ಇತರೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ.
ವಿವಿಧ ವಿಷಯಗಳ ಪರಾಮರ್ಶೆ ನಂತರ ನೀತಿ ರೂಪಿಸುವ ಸಂಬಂಧ ಈ ಸಭೆ ಶಿಫಾರಸ್ಸು ಮಾಡಲಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ಈ ಸಭೆ ನಡೆದಿತ್ತು.