ಇಂದೋರ್‌ನಲ್ಲಿ ದಾವೂದಿ ಬೋಹ್ರಾ ಸಮುದಾಯ ಆಯೋಜಿಸಿದ್ದ ಅಶರಾ ಮುಬಾರಕದಲ್ಲಿ ಪ್ರಧಾನಿ ಭಾಷಣ; ಇಡೀ ಜಗತ್ತು ಒಂದು ಕುಟುಂಬ ಎಂಬುದು ಭಾರತೀಯರ ಭಾವನೆ; ಪ್ರತಿಯೊಬ್ಬರನ್ನು ಜೊತೆಯಲ್ಲಿ ಕೊಂಡೊಯ್ಯುವುದು ಭಾರತದ ಸಂಪ್ರದಾಯ ಎಂದು ಹೇಳಿಕೆ.

ಭಾರತದ ಜನತೆ, ಇಡೀ ವಿಶ್ವವೇ ಒಂದು ಕುಟುಂಬ ಎಂದು ಪರಿಭಾವಿಸಿದ್ದು, ಪ್ರತಿಯೊಬ್ಬರನ್ನು ಜೊತೆಯಲ್ಲಿ ಕೊಂಡೊಯ್ಯುವುದು ಭಾರತದ ಸಂಪ್ರದಾಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ದಾವೂದಿ ಬೋಹ್ರಾ ಸಮುದಾಯ ಇಂದೋರ್‌ನಲ್ಲಿಂದು ಹುತಾತ್ಮ ಇಮಾಮ್ ಹುಸೇನ್ ಅವರ ಸ್ಮರಣಾರ್ಥ ಆಯೋಜಿಸಿರುವ ಅಶಾರ ಮುಬಾರಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತೀಯ ಸಮಾಜ ಮತ್ತು ಪರಂಪರೆ ಭಾರತವನ್ನು ಇತರ ದೇಶಗಳಿಗಿಂತ ವಿಭಿನ್ನವಾಗಿಸಿದೆ ಎಂದು ಹೇಳಿದರು. ಭಾರತೀಯರು ತಮ್ಮ ಹಿಂದಿನ ಸಂಗತಿಗಳ ಬಗ್ಗೆ ಹೆಮ್ಮೆ ಹೊಂದಿದವರಾಗಿದ್ದಾರೆ, ವರ್ತಮಾನದ ಬಗ್ಗೆ ನಂಬಿಕೆ ಇಟ್ಟಿದ್ದಾರೆ ಹಾಗೂ ಉಜ್ವಲ ಭವಿಷ್ಯದ ಬಗ್ಗೆ ವಿಶ್ವಾಸ ತಳೆದಿದ್ದಾರೆ ಎಂದು  ಪ್ರಧಾನಮಂತ್ರಿ ಹೇಳಿದರು. ಇಮಾಮ್ ಹುಸೇನಿ ಅವರು, ಶಾಂತಿ ಮತ್ತು ನ್ಯಾಯಕ್ಕಾಗಿ ಹುತಾತ್ಮರಾದವರು. ಅನ್ಯಾಯದ ವಿರುದ್ಧ ದನಿ ಎತ್ತಿದವರು ಎಂದು ನರೇಂದ್ರ ಮೋದಿ ನುಡಿದರು.