ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರ ಸರ್ಬಿಯಾ, ಮಾಲ್ಟಾ ಮತ್ತು ರೊಮೇನಿಯಾ ಮೂರು ದೇಶಗಳ ಪ್ರವಾಸ ಇಂದಿನಿಂದ ಆರಂಭ

ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಇಂದಿನಿಂದ ಸರ್ಬಿಯಾ, ಮಾಲ್ಟಾ ಮತ್ತು ರೊಮೇನಿಯಾ ಈ ಮೂರು ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಏಳು ದಿನಗಳ ತಮ್ಮ ಪ್ರವಾಸದ ಮೊದಲ ಚರಣದಲ್ಲಿ  ಅವರು ಸರ್ಬಿಯಾ ತಲುಪಲಿದ್ದು, ಆ ದೇಶದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರಿಗೆ ವಿವರ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯ ಐರೋಪ್ಯ ವಿಭಾಗದ ಜಂಟಿ ಕಾರ್ಯದರ್ಶಿ ಡಾ. ಅಂಜುಕುಮಾರ್, ಉಪರಾಷ್ಟ್ರಪತಿ ಅವರ ಮೂರು ದೇಶಗಳ ಪ್ರವಾಸ ಸಂದರ್ಭದಲ್ಲಿ ಕೃಷಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಹೇಳಿದರು.

ವೆಂಕಯ್ಯನಾಯ್ಡು ಅವರು ಪ್ರವಾಸದ ಎರಡನೇ ಚರಣದಲ್ಲಿ ಭಾನುವಾರ ಮಾಲ್ಟಾಗೆ ಆಗಮಿ ಆ ದೇಶದ ನಾಯಕರೊಂದಿಗೆ ಪರಸ್ಪರ ಹಿತಾಸಕ್ತಿಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಉಪರಾಷ್ಟ್ರಪತಿ ಅವರು ತಮ್ಮ ಪ್ರವಾಸದ ಕೊನೆಯ ಚರಣವಾಗಿ ಈ ತಿಂಗಳ ೧೮ ರಂದು ರೊಮೇನಿಯಾ ತಲುಪಲಿದ್ದಾರೆ.

ಈ ಐರೋಪ್ಯ ದೇಶಗಳೊಂದಿಗೆ ಭಾರತ ಐತಿಹಾಸಿಕ ಬಾಂಧವ್ಯ ಹೊಂದಿದ್ದು, ಉಪರಾಷ್ಟ್ರಗಳ ಭೇಟಿ ದ್ವೀಪಕ್ಷಿಯ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ ಎಂದು ಡಾ. ಅಂಜುಕುಮಾರ್ ತಿಳಿಸಿದ್ದಾರೆ.