ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್ ಜಿಲ್ಲೆಯಲ್ಲಿ ಬಸ್ ಅಪಘಾತ; ೧೧ ಸಾವು.

ಜಮ್ಮು ಮತ್ತು ಕಾಶ್ಮೀರ್ ಕಿಶ್ತವಾರ್ ಜಿಲ್ಲೆಯಲ್ಲಿ ಮಿನಿ ಬಸ್ಸೊಂದು ಚೀನಾಬ್ ನದಿಗೆ ಉರುಳಿ ಬಿದ್ದು, ೧೧ ಮಂದಿ ಮೃತಪಟ್ಟಿದ್ದಾರೆ ಹಾಗೂ ಇತರೆ ೧೩ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ ೧೧ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಕಿಶ್ತವಾರ್ ಜಿಲ್ಲಾಧಿಕಾರಿ ಅಂಗ್ರೇಜ್ ಸಿಂಗ್ ರಾಣಾ ತಿಳಿಸಿದ್ದಾರೆ. ಗಾಯಗೊಂಡವರನ್ನು ಕಿಶ್ತಾರ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ೨೫ ರಿಂಗ ೩೦ ಮಂದಿ ಪ್ರಯಾಣಿಕರಿದ್ದ ಮಿನಿ ಬಸ್ ಕುರಿಯಾ-ಕೇಶ್ವಾನ್ ಸಂಪರ್ಕ ರಸ್ತೆಯಲ್ಲಿ ಕೇಶ್ವಾನ್‌ನಿಂದ ಕಿಶ್ತವಾರ್‌ಗೆ ಪ್ರಯಾಣಿಸುತ್ತಿದ್ದಾಗ ಇಂದು ಬೆಳಗ್ಗೆ ತಕ್ರಾಯಿ ಬಳಿ ಚೀನಾಬ್ ನದಿಗೆ ಉರುಳಿ ಬಿತ್ತೆಂದು ವರದಿಯಾಗಿದೆ.