ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ಪುರುಷರ ೨೫ ಮೀಟರ್ ಜೂನಿಯರ್ ವಿಭಾಗದ ಪಿಸ್ತೂಲ್ ಪಂದ್ಯದಲ್ಲಿ ಸ್ವರ್ಣ ಗೆದ್ದ ೧೬ ವರ್ಷದ ಉಧಯ್‌ವೀರ್ ಸಿಂಗ್

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ೨೫ ಮೀಟರ್ ಜೂನಿಯರ್ ವಿಭಾಗದ ಪಿಸ್ತೂಲ್ ಪಂದ್ಯದಲ್ಲಿ ೧೬ ವರ್ಷದ ಉಧಯ್‌ವೀರ್ ಸಿಂಗ್ ವೈಯಕ್ತಿಕ ಸ್ವರ್ಣ ಪದಕ ಗೆದ್ದಿದ್ದಾರೆ. ಭಾರತ ತಂಡ ಸ್ವರ್ಣ ಗೆಲ್ಲಲು ಸಹ ಅವರು ತಮ್ಮ ಸಹಕಾರ ನೀಡಿದರು.

ಭಾರತದ ಸ್ಪರ್ಧಿಗಳಾದ ವಿಜಯ್ ವೀರ್ ಸಿಧು ಅವರು ೪ನೇ ಸ್ಥಾನ ಮತ್ತು ರಾಜ್‌ಕನ್ವರ್ ಸಿಂಗ್ ಸಂಧು ೨೦ನೇ ಸ್ಥಾನ ಗಳಿಸಿದ್ದಾರೆ.

೨೫ ಮೀಟರ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಪದಕ ಬರಲಿಲ್ಲ; ಆ ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರುಪ್ರೀತ್ ಸಿಂಗ್ ೫೮೧ ಅಂಕ ಗಳಿಸಿ ೧೦ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ವಿಜಯ್‌ಕುಮಾರ್ ಕೂಡ ಪದಕ ಗಳಿಸುವಲ್ಲಿ ವಿಫಲರಾದರು.

ಚಾಂಪಿಯನ್‌ಶಿಪ್‌ನಲ್ಲಿ ಭಾರತ ೯ ಚಿನ್ನ, ೮ ಬೆಳ್ಳಿ ಮತ್ತು ೭ ಕಂಚಿನ ಪದಕ ಸೇರಿ ಒಟ್ಟು ೨೪ ಪದಕ ಗಳಿಸಿ ಪದಕ ಪಟ್ಟಿಯಲ್ಲಿ ೪ನೇ ಸ್ಥಾನದಲ್ಲಿದೆ.

ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗಳಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.