ದಾವೂದಿ ಬೋಹ್ರಾ ಸಮುದಾಯ ಇಂದೋರ್‌ನಲ್ಲಿಂದು ಹುತಾತ್ಮ ಇಮಾಮ್ ಹುಸೇನ್ ಸ್ಮರಣಾರ್ಥ ಆಯೋಜಿಸಿರುವ ಅಶಾರ ಮುಬಾರಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿ

ದಾವೂದಿ ಬೋಹ್ರಾ ಸಮುದಾಯ ಇಂದೋರ್‌ನಲ್ಲಿಂದು ಹುತಾತ್ಮ ಇಮಾಮ್ ಹುಸೇನ್ ಅವರ ಸ್ಮರಣಾರ್ಥ ಆಯೋಜಿಸಿರುವ ಅಶಾರ ಮುಬಾರಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

ಅಲ್ಲದೆ, ಪ್ರಧಾನಿ ಅವರು ದಾವೂದಿ ಬೋಹ್ರಾ ಸಮುದಾಯದ ೫೩ನೇ ಧಾರ್ಮಿಕ ಮುಖ್ಯಸ್ಥ ಸೈಯೀದಾ ಮುಫದಲ್ ಸೈಫುದ್ದೀನ್ ಅವರನ್ನು ಭೇಟಿ ಮಾಡಲಿದ್ದಾರೆ.

ಡಾ.ಸೈಫುದ್ದೀನ್ ಅವರು ೯ ದಿನಗಳ ಧಾರ್ಮಿಕ ಸತ್ಸಂಗವನ್ನು ನಗರದ ಸೋಫಿಯಾ ನಗರದ ಮಸೀದಿಯಲ್ಲಿ ಹಮ್ಮಿಕೊಂಡಿದ್ದು, ಅದು ಬುಧವಾರ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕೂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.