ಬಾಂಗ್ಲಾದೇಶಕ್ಕೆ ರೈಲ್ವೇ ಮತ್ತು ವಿದ್ಯುತ್ ಯೋಜನೆಯ ಕೊಡುಗೆ ನೀಡಿದ ಭಾರತ

ಮಹತ್ವದ ಅಭಿವೃದ್ಧಿಯಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರೊಂದಿಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮುಖಂಡ ಶೇಖ್ ಹಸೀನಾ ಜಂಟಿಯಾಗಿ ಮೂರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

ಬಾಂಗ್ಲಾದೇಶದ ಅಭಿವೃದ್ಧಿಯ ಯೋಜನೆಗಳಿಗೆ ಭಾರತದಿಂದ ಬಾಂಗ್ಲಾದೇಶಕ್ಕೆ 500 ಮೆಗಾವಾಟ್ ವಿದ್ಯುತ್ ಪೂರೈಕೆ ಮತ್ತು ಎರಡು ರೈಲ್ವೆ ಯೋಜನೆಗಳು, ಅಖೌರಾ-ಅಗರ್ತಲಾ ರೈಲ್ವೆ ಸಂಪರ್ಕ ಮತ್ತು ಬಾಂಗ್ಲಾದೇಶ ರೈಲ್ವೆಯ ಕುಲೋರಾ-ಶಾಬಾಜ್ಪುರ್ ವಿಭಾಗದ ಪುನರ್ವಸತಿ ಇವುಗಳು ಸೇರಿವೆ‌. ಈ ಯೋಜನೆಗಳು ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರಗಳೆರಡರ ನಡುವಿನ ವಾಣಿಜ್ಯ, ವ್ಯವಹಾರ ಮತ್ತು ಸಂಪರ್ಕ ಹೆಚ್ಚಿಸಲು ಅವಕಾಶ ಮಾಡಿಕೊಡಲಿದೆ‌.

ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ಮುಖ್ಯ ಯೋಜನೆಗಳನ್ನು ಉದ್ಘಾಟಿಸಿ ಹೊಸದಿಲ್ಲಿ ಮತ್ತು ಢಾಕಾ ನಡುವಿನ ಸೌಹಾರ್ದ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಿಸಲಾಯಿತು. ಕಾರ್ಯಕ್ರಮದ ತರುವಾಯ “ಪ್ರಕಾಶಮಾನವಾದ ಜೀವನ, ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವುದು ಮತ್ತು ಭಾರತ-ಬಾಂಗ್ಲಾ ಸ್ನೇಹವನ್ನು ಹೆಚ್ಚಿಸುವುದು” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ಇದು ಈ ಮೂರು ಯೋಜನೆಗಳ ಪ್ರಾಮುಖ್ಯತೆಯನ್ನು ಸಾರುತ್ತದೆ‌.

ಅಸ್ತಿತ್ವದಲ್ಲಿರುವ 500 ಮೆಗಾವಾಟ್ ವಿದ್ಯುಚ್ಛಕ್ತಿ ವಿದ್ಯುತ್ ಪೂರೈಕೆ ಮತ್ತು ಬಾರಾಮಾರ (ಭಾರತದಲ್ಲಿ) ಪ್ರಸರಣ ಮಾರ್ಗಗಳ ಮೂಲಕ ಪೂರೈಸುವ ಭಾರತದ ನಿರ್ಧಾರ 2021 ರ ವೇಳೆಗೆ ಮಧ್ಯಮ ವರ್ಗದ ದೇಶವಾಗುವ ಮತ್ತು ೨೦೫೧ ರ ಹೊತ್ತಿಗೆ ಅಭಿವೃದ್ಧಿ ಹೊಂದಿದೆ ದೇಶವಾಗುವ ಬಾಂಗ್ಲಾದೇಶದ ಪ್ರಯಾಣದಲ್ಲಿ ಭಾರತ ಪಾಲುದಾರನಾಗಬೇಕೆಂಬ ದೇಶದ ಆಶಯವನ್ನು ಗುರುತಿಸಿದೆ.

ಮುಂಬರುವ ಎರಡು ದಶಕಗಳಲ್ಲಿ ಮಧ್ಯಮ ಆದಾಯದ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ದೇಶಕ್ಕೆ ತನ್ನ ದೇಶವನ್ನು ಪರಿವರ್ತಿಸುವ ಪ್ರಧಾನಿ ಹಸೀನಾ ಅಭಿವೃದ್ಧಿ ಗುರಿಗಳನ್ನು ಮೋದಿ ಶ್ಲಾಘಿಸಿದ್ದಾರೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಬಾಂಗ್ಲಾದೇಶದ ವಿದೇಶಾಂಗ ಸಚಿವರು ಕ್ರಮವಾಗಿ ದೆಹಲಿ ಮತ್ತು ಢಾಕಾದಿಂದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸೇರಿಕೊಂಡರು.

ಈ ವಿದ್ಯುತ್ ಪ್ರಸರಣ ಯೋಜನೆ ಪೂರ್ಣಗೊಂಡ ಬಳಿಕ ಬಾಂಗ್ಲಾದೇಶಕ್ಕೆ ಸರಬರಾಜು ಮಾಡುವ ಒಟ್ಟು ವಿದ್ಯುತ್ 1.16 ಗಿಗಾ ವ್ಯಾಟ್ ಆಗಲಿದೆ ಎಂದು ಪ್ರಧಾ‌ನಿ ಮೋದಿ ಹೇಳಿದರು. ಅವರು ಮೆಗಾ ವ್ಯಾಟ್ ನಿಂದ ಗಿಗಾವಾಟ್ ಗಳಿಗೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧದ ಬದಲಾವಣೆ ‘ಭಾರತ ಮತ್ತು ಬಾಂಗ್ಲಾದೇಶ ಗಳ ಸಂಬಂಧದ ಸುವರ್ಣ ಕಾಲವನ್ನು ಸಂಕೇತಿಸುವ ಪ್ರಯಾಣ’ ಎಂದು ಬಣ್ಣಿಸಿದರು.

ಅಖುರಾ-ಅಗರ್ತಲಾ ರೈಲ್ವೆ ಸಂಪರ್ಕದ ಬಗ್ಗೆ ಮಾತನಾಡಿದ ಭಾರತದ ಪ್ರಧಾನಿ, ಎರಡು ರಾಷ್ಟ್ರಗಳ ನಡುವಿನ ಗಡಿರೇಖೆಯ ಸಂಪರ್ಕದಲ್ಲಿ ಇನ್ನೊಂದು ಕೊಂಡಿ ನೀಡಲಿದೆ ಎಂದು ಹೇಳಿದರು. “ಹತ್ತಿರವಾದ ಸಂಬಂಧಗಳು ಮತ್ತು ಎರಡು ದೇಶಗಳ ನಡುವಿನ ಜನರ ಸಂಬಂಧಗಳು ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಳ್ಳುತ್ತದೆ” ಎಂದು ಮೋದಿ ಹೇಳಿದರು.

ದೇಶದ ಈಶಾನ್ಯ ಪೂರ್ವ ರಾಜ್ಯಗಳನ್ನು ಬಾಂಗ್ಲಾದೇಶ ಮತ್ತು ಆಗ್ನೇಯ ಏಷ್ಯಾಗಳೊಂದಿಗೆ ರೈಲುಮಾರ್ಗಗಳ ಮೂಲಕ ಸಂಪರ್ಕಿಸಲು ಯೋಜನೆಗಳು ಯೋಜಿಸಿವೆ. ಇಲ್ಲಿಯವರೆಗೆ ದೇಶದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿ ವ್ಯಾಪಾರ ಮತ್ತು ಅಭಿವೃದ್ಧಿ ಹೆಚ್ಚಾಗುತ್ತಿದೆ.

ಬಾಂಗ್ಲಾದೇಶದ ಕುಲೋರಾ-ಶಾಬಾಜ್ಪುರ್ ವಿಭಾಗದಲ್ಲಿ ಭಾರತದ ಉಪಖಂಡದ ವಿಭಜನೆಗೆ ಮುಂಚೆಯೇ ರೈಲ್ವೇ ಇತ್ತು. ಪುನಃಸ್ಥಾಪನೆಗೆ ಒಳಗಾಗುವ ಮಾರ್ಗವು ಏಷ್ಯಾವನ್ನು ಆಗ್ನೇಯ ಏಷ್ಯಾದ ದೇಶಗಳಿಗೆ ಸಂಪರ್ಕಿಸಲು ಬಯಸುತ್ತಿರುವ ಟ್ರಾನ್ಸ್ ಏಷ್ಯನ್ ರೈಲ್ವೆ ಯೋಜನೆಯ ಪ್ರಮುಖ ಭಾಗವಾಗಿದೆ.

15.5 ಕಿ.ಮೀ ಉದ್ದದ ಅಖೌರಾ-ಅಗರ್ತಲಾ ರೈಲ್ವೆ ಮಾರ್ಗವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯಾಪಾರವನ್ನು ಚಿತ್ತಗಾಂಗ್ ಬಂದರಿನ ಮೂಲಕ ಹೆಚ್ಚಿಸಲು ಅನುಕೂಲವಾಗಲಿದೆ, ಇದು ವಿಶ್ವದ ಅತ್ಯಂತ ಬೃಹತ್ ಬಂದರುಗಳಲ್ಲಿ ಒಂದಾಗಿದೆ. 2010 ರಲ್ಲಿ ಶೇಖ್ ಹಸೀನಾ ಅವರ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ರೈಲ್ವೆ ಮಾರ್ಗ ಯೋಜನೆಯು ತ್ರಿಪುರಾ ಮತ್ತು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ನಡುವಿನ ಅಂತರ ಮತ್ತು ಪ್ರಯಾಣದ ಸಮಯವನ್ನು ಕಡಿಮೆಗೊಳಿಸುತ್ತದೆ ಏಕೆಂದರೆ ಬಾಂಗ್ಲಾದೇಶದ ಅಖೌರಾ ಮೂಲಕ ಕೊಲ್ಕತ್ತಾ ತಲುಪಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಯೋಜನೆಯು ಎರಡು ವರ್ಷಗಳ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ.

ಗಮನಾರ್ಹವಾಗಿ, ಪ್ರಧಾನಿ ಮೋದಿ ಭಾರತ-ಬಾಂಗ್ಲಾದೇಶದ ದ್ವಿಪಕ್ಷೀಯ, ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ಒಂದು ಮಾದರಿಯಾಗಿ ಪ್ರದರ್ಶಿಸಲು ಬಯಸಿದ್ದರು. “ನೆರೆಹೊರೆಯ ರಾಷ್ಟ್ರಗಳ ನಾಯಕರು ನೆರೆಹೊರೆಯವರಂಥ ಸಂಬಂಧವನ್ನು ಹೊಂದಿರಬೇಕು, ಮಾತುಕತೆ ಮತ್ತು ಆಗಾಗ್ಗೆ ಭೇಟಿ ನೀಡಬೇಕು, ಶಿಷ್ಟಾಚಾರಗಳಲ್ಲಿ ಬಂಧಿ ಆಗಿರಬಾರದು” ಎಂದು ಮೋದಿ ಹೇಳಿದರು.

ಬರಹ: ದೀಪಂಕರ್ ಚಕ್ರವರ್ತಿ, ವಿಶೇಷ ಪ್ರತಿನಿಧಿ, ದಿ ಸ್ಟೇಟ್ಸ್ ಮನ್