ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್; ಉದಯವೀರ್ ಸಿಂಗ್‌ಗೆ ವೈಯಕ್ತಿಕ ಚಿನ್ನ; ಕಿರಿಯ ಪುರುಷರ ೨೫ ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಅಗ್ರಸ್ಥಾನ

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ೨೫ ಮೀಟರ್ ಜೂನಿಯರ್ ವಿಭಾಗದ ಪಿಸ್ತೂಲ್ ಪಂದ್ಯದಲ್ಲಿ ೧೬ ವರ್ಷದ ಉದಯ್‌ವೀರ್ ಸಿಂಗ್ ವೈಯಕ್ತಿಕ ಸ್ವರ್ಣ ಪದಕ ಗೆದ್ದಿದ್ದಾರೆ. ಭಾರತ ತಂಡ ಸ್ವರ್ಣ ಗೆಲ್ಲಲು ಸಹ ಅವರು ತಮ್ಮ ಸಹಕಾರ ನೀಡಿದರು. ಸಿಂಗ್ ಅವರು, ವೈಯಕ್ತಿ ಸ್ಪರ್ಧೆಯಲ್ಲಿ ೫೮೭ ಅಂಕ ಗಳಿಸಿ, ಅಮೆರಿಕದ ಹೆನ್ರಿ ಲಿವರೆಟ್ ಮತ್ತು ಕೊರಿಯಾದ ಲಿ ಜೇಕ್ಯೂನ್ ಅವರನ್ನು ಹಿಮ್ಮೆಟ್ಟಿಸಿದರು. ಉದಯವೀರ್ ಸಿಂಗ್, ವಿಜಯವೀರ್ ಸಿಂಧು ಮತ್ತು ರಾಜ್‌ಕನ್ವಾರ್ ಸಿಂಗ್ ಸಂಧು ಅವರನ್ನೊಳಗೊಂಡ ಭಾರತೀಯ ತಂಡ ಒಟ್ಟಾರೆ ಒಂದು ಸಾವಿರದ ೭೩೬ ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಪಾತ್ರವಾಯಿತು. ಚಾಂಪಿಯನ್‌ಶಿಪ್‌ನಲ್ಲಿ ಭಾರತ ೯ ಚಿನ್ನ, ೮ ಬೆಳ್ಳಿ ಮತ್ತು ೭ ಕಂಚಿನ ಪದಕ ಸೇರಿ ಒಟ್ಟು ೨೪ ಪದಕ ಗಳಿಸಿ ಪದಕ ಪಟ್ಟಿಯಲ್ಲಿ ೪ನೇ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗಳಲ್ಲಿ ಇದು ಭಾರತದ ಅತ್ಯುತ್ತಮ ಸಾಧನೆಯಾಗಿದೆ.