ದೇಶದೆಲ್ಲೆಡೆ ಇಂದಿನಿಂದ ಶಕ್ತಿದೇವತೆ ದುರ್ಗಾದೇವಿ ಆರಾಧನೆ ಆರಂಭ ಕರ್ನಾಟಕದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ೨೦೧೮ಕ್ಕೆ ಚಾಲನೆ

ದುರ್ಗಾದೇವಿಯನ್ನು ಪೂಜಿಸುವ ನವರಾತ್ರಿ ಹಬ್ಬ ದೇಶದೆಲ್ಲಡೆ ಇಂದು ಶ್ರದ್ಧಾಭಕ್ತಿಯಿಂದ ಆರಂಭಗೊಂಡಿದೆ. ಭಕ್ತರು ಇಂದು ಬೆಳಿಗ್ಗೆಯೇ ದೇವಸ್ಥಾನಗಳಿಗೆ ತೆರಳಿ ಶಕ್ತಿದೇವತೆ ದುರ್ಗೆಯನ್ನು ಪೂಜಿಸಿದರು.

ನವರಾತ್ರಿ ಮೊದಲ ದಿನವಾದ ಇಂದು ದುರ್ಗಾದೇವಿಯನ್ನು ಶೈಲಪುತ್ರಿ ರೂಪದಲ್ಲಿ ಪೂಜಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಕ್ತರು ಕಲ್ಕಜಿ ಹಾಗೂ ಜ್ಞಾನದೇವಲನ್ ಹಾಗೂ ಇತರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು.

ನವರಾತ್ರಿ ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಕೋರಿದ್ದಾರೆ. ಶಕ್ತಿ ದೇವತೆ ಮಾತೆ ದುರ್ಗಿ ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ತರಲಿ ಎಂದು ಅವರು ಟ್ವೀಟ್‌ನಲ್ಲಿ ಹಾರೈಸಿದ್ದಾರೆ.