ಇಂಧನ ಕ್ಷೇತ್ರದಲ್ಲಿ ಭಾರತದ ದಾಪುಗಾಲು

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಇಂಟರ್ನ್ಯಾಷನಲ್ ಸೌರ ಮೈತ್ರಿ (ISA), 2 ನೇ ಹಿಂದೂ ಮಹಾಸಾಗರದ ರಿಮ್ ಅಸೋಸಿಯೇಷನ್(IORA) ಇಂಧನ ಮಂತ್ರಿಗಳ ಸಭೆ ಮತ್ತು 2 ನೇ ಗ್ಲೋಬಲ್ ಮರು ಹೂಡಿಕೆ ಸಭೆ ಹಾಗೂ ಎಕ್ಸ್ಪೋಗಳ ಮೊದಲ ಅಸೆಂಬ್ಲಿಯನ್ನು ಆಯೋಜಿಸಿತು. ಮೂರುಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸಲು ಮತ್ತು ಭಾರತೀಯ ಇಂಧನ ಪಾಲುದಾರರೊಂದಿಗೆಜಾಗತಿಕ ಹೂಡಿಕೆ ಸಮುದಾಯವನ್ನು ಸಂಪರ್ಕಿಸಲು ವಿಶ್ವದ ಪ್ರಯತ್ನವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿತ್ತು.

2 ನೇ ಗ್ಲೋಬಲ್ ರಿ-ಇನ್ವೆಸ್ಟ್ ಇಂಡಿಯಾ- ISA ಪಾಲುದಾರಿಕೆ, ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಎಕ್ಸ್ಪೋದಲ್ಲಿ 77 ದೇಶಗಳ 20,000 ಕ್ಕಿಂತಲೂ ಹೆಚ್ಚುಪ್ರತಿನಿಧಿಗಳು ಭಾಗವಹಿಸಿದರು. ಇದರಲ್ಲಿ 40 ಮಂದಿ ಮಂತ್ರಿಗಳ ಮಟ್ಟದಲ್ಲಿದ್ದರು. ವಿಶ್ವಸಂಸ್ಥೆ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಅಧ್ಯಕ್ಷರು, ಅಂತರರಾಷ್ಟ್ರೀಯಹಣಕಾಸು ಸಂಸ್ಥೆಗಳು, ಸಾಂಸ್ಥಿಕ ಕ್ಷೇತ್ರದಿಂದ ಬಂದ ಪ್ರತಿನಿಧಿಗಳ ಭಾಗವಹಿಸುವಿಕೆಗೆ ಈ ಅಸೆಂಬ್ಲಿ ಸಾಕ್ಷಿಯಾಗಿತ್ತು. ಮರು-ಹೂಡಿಕೆ 2018ರ ಅವಧಿಯಲ್ಲಿ, ಫ್ರಾನ್ಸ್, ಯುಎಸ್ಎ, ಆಸ್ಟ್ರೇಲಿಯಾ, ಯುಕೆ, ಫಿನ್ಲ್ಯಾಂಡ್ ಮತ್ತು ಯುರೋಪಿಯನ್ ಯೂನಿಯನ್ ಮುಂತಾದ ಪ್ರಮುಖ ದೇಶಗಳ ಒಂಬತ್ತು ಸಭೆಗಳು ಆಯೋಜಿಸಲ್ಪಟ್ಟವು.

ಜಾಗತಿಕ ಸೌರ ಇಂಧನ ಕ್ಷೇತ್ರದಲ್ಲಿ ISAಯ ಪ್ರಮುಖ ಪಾತ್ರವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಮೋದಿ, “ಹವಾಮಾನ ಸಮಸ್ಯೆ ಅರಿತುಕೊಳ್ಳಲು ISA ಒಂದುವೇದಿಕೆಯಾಗಿದೆ. ಭವಿಷ್ಯದ ಪೀಳಿಗೆಗೆ ನಾವು ಕೊಡುವ ಉಡುಗೊರೆ ಇದು. ಭವಿಷ್ಯದಲ್ಲಿ, ಈ ಮೈತ್ರಿಯು ಈಗ OPEC ಪ್ರಪಂಚಕ್ಕೆ ಹೇಗೆಯೋ ಹಾಗೆ” ಎಂದರು. ಸೌರಶಕ್ತಿಯು ತೈಲ ಬಾವಿಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಅವರ ಉಪಸ್ಥಿತಿಯು  ಐಎಸ್ಎ ಹೊಂದಿರುವ ಪ್ರಾಮುಖ್ಯತೆಗೆಪುರಾವೆಯಾಗಿತ್ತು. ಐ.ಒ.ಆರ್.ಎ ದೇಶಗಳ ಇಂಧನ ಸವಾಲುಗಳು ಒಂದೇ ರೀತಿಯದ್ದಾಗಿವೆ. 2030 ರ ಹೊತ್ತಿಗೆ ಭಾರತವು ಪಳೆಯುಳಿಕೆ ಇಂಧನ ಮೂಲಗಳಿಂದ 40 ಶೇಕಡಾ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ ಮತ್ತು 2022ರ ಹೊತ್ತಿಗೆ, ನಾವು ಯಶಸ್ವಿಯಾಗಿ 175 ಜಿಡಬ್ಲ್ಯೂ ನವೀಕರಿಸಬಹುದಾದ ಇಂಧನದ ಗುರಿಯನ್ನುಮೀರಿಸಲಿದ್ದೇವೆ. “ಒನ್ ವರ್ಲ್ಡ್, ಒನ್ ಸನ್ ಮತ್ತು ಒನ್ ಗ್ರಿಡ್” ಎಂಬ ಪ್ರಸ್ತಾಪವನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಮುಂದಿಟ್ಟರು.

ಹವಾಮಾನ ಬದಲಾವಣೆಯು ಅಪಾಯಕಾರಿ ಸಮಸ್ಯೆ ತಂದೊಡ್ಡಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಒತ್ತು ನೀಡಿದರು. “ಜಾಗತಿಕನವೀಕರಿಸಬಹುದಾದ ಇಂಧನ ಕ್ರಾಂತಿಯಾಗಬೇಕು. ಆದಾಗ್ಯೂ, ಗುರಿಗಳನ್ನು ಪೂರೈಸುವ ರಾಜಕೀಯ ಬದ್ಧತೆಯು ನಮಗೆ ಇನ್ನೂ ಕೊರತೆಯಿದೆ, ಇದಕ್ಕಾಗಿ ಹೆಚ್ಚುಮಹತ್ವಾಕಾಂಕ್ಷೆ ಮತ್ತು ಹೆಚ್ಚಿನ ಕ್ರಮದ ಅಗತ್ಯವಿದೆ ” ಎಂದರು.

ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ರಾಜ್ ಕುಮಾರ್ ಸಿಂಗ್, “ನಮ್ಮ ಪ್ರಧಾನಿಯವರು ಒಂದು ವಿಶ್ವ, ಒಂದು ಸೂರ್ಯ, ಮತ್ತು ಒಂದು ಗ್ರಿಡ್ ನ ಹೊಸ ಸವಾಲನ್ನು ನೀಡಿದ್ದಾರೆದೆ. ಇದು ಕಾರ್ಯಸಾಧ್ಯವಾಗಿದೆ ಮತ್ತು ನಾವು ಅದನ್ನು ಸಾಧಿಸುತ್ತೇವೆ.” ಎಂದರು.

21 ರಾಷ್ಟ್ರಗಳು ನವೀಕರಿಸಬಹುದಾದ ಇಂಧನ ಕುರಿತ ದೆಹಲಿ ನಿರ್ಣಯವನ್ನು ಅಂಗೀಕರಿಸಿದ್ದು ಐಓಆರ್ಎ ಸದಸ್ಯ ರಾಷ್ಟ್ರಗಳ ಸಹಯೋಗದೊಂದಿಗೆ ಹಿಂದೂಮಹಾಸಾಗರದ ಲಿಟ್ಟೋರಲ್ ನಲ್ಲಿ ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸುವ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳುವುದು, ಹಿಂದೂ ಮಹಾಸಾಗರದಪ್ರದೇಶಕ್ಕೆ ಸಾಮಾನ್ಯ ನವೀಕರಿಸಬಹುದಾದ ಇಂಧನ ಕಾರ್ಯಸೂಚಿಯ ಅಭಿವೃದ್ಧಿ ಮತ್ತು ಪ್ರಾದೇಶಿಕ ಸಾಮರ್ಥ್ಯದ ಕಟ್ಟಡವನ್ನು ಉತ್ತೇಜಿಸುವ ಬಗ್ಗೆ ತೀರ್ಮಾನಿಸಲಾಯಿತು.

ಭಾರತದ ಗುರಿಯನ್ನು ಪೂರೈಸಲು 76 ಶತಕೋಟಿ ಡಾಲರ್ ನಷ್ಟು ಹೂಡಿಕೆಯ ಅಗತ್ಯವಿದೆ. ಅಲ್ಲಿ ಸಾರ್ವಜನಿಕ ಹಣಕಾಸು ನಿಧಿಗಳು ಮಾತ್ರ ಸಾಕಾಗುವುದಿಲ್ಲ. ಅದಕ್ಕಾಗಿನವೀನ ಖಾಸಗಿ ಬಂಡವಾಳ ಬೇಕಾಗುತ್ತದೆ. ಶುದ್ಧ ಶಕ್ತಿಯ ಪ್ರಮಾಣೀಕರಣಕ್ಕಾಗಿ ಕಾರ್ಯತಂತ್ರದ ಜಾಗತಿಕ ಪಾಲುದಾರಿಕೆಗಳು, ನವೀಕರಿಸಬಹುದಾದ ಇಂಧನವಲಯದಲ್ಲಿ ವೇಗವಾಗಿ ಪಾವತಿಸುವ ಭದ್ರತಾ ಕಾರ್ಯವಿಧಾನವನ್ನು ಸ್ಥಾಪಿಸಬೇಕಿದೆ. ನವೀಕರಿಸಬಹುದಾದ ಇಂಧನ ಬೆಳವಣಿಗೆಗೆ ತ್ವರಿತ ರಾಜಕೀಯ ನಿರ್ಧಾರಗಳನ್ನುಸಾಧಿಸುವುದು ಮತ್ತು ಆಫ್ರಿಕಾ ಸೇರಿದಂತೆ ಖಂಡಗಳ ನಡುವಿನ ಸಹಕಾರಿ ಸಹಾಯದಿಂದ ಹವಾಮಾನ ಬದಲಾವಣೆಯ ದೈತ್ಯಾಕಾರದ ಸವಾಲನ್ನು ಎದುರಿಸುವಅಗತ್ಯವಿದೆ. 2015 ರಿಂದ 2018ರವರೆಗೆ ಕಳೆದ ಮೂರು ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರವು 81 ಪ್ರತಿಶತದಷ್ಟು ಬೆಳೆದಿದೆ. 2030ರ ಹೊತ್ತಿಗೆ40 ಪ್ರತಿಶತದಷ್ಟು ಪಳೆಯುಳಿಕೆ ಶಕ್ತಿಯನ್ನು ಉತ್ಪಾದಿಸುವ ಗುರಿ ಭಾರತದ್ದು. ಭಾರತವು ನವೀಕರಿಸಬಹುದಾದ ಇಂಧನಕ್ಕೆ ಒಂದು ದೊಡ್ಡ ಮಾರುಕಟ್ಟೆಯಾಗಿದ್ದು, ಪ್ರಪಂಚದಾದ್ಯಂತ ಇರುವ ಕಂಪನಿಗಳು ಹೂಡಿಕೆ ಮತ್ತು ಬೆಳವಣಿಗೆಗಾಗಿ ಭಾರತಕ್ಕೆ ಬರಬಹುದು.

ಲೇಖನ : ಯೋಗೇಶ್ ಸೂದ್, ಪತ್ರಕರ್ತರು