ತಜಕಿಸ್ತಾನದ ದುಷಾನ್‌ಬೆಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣ ಆರಂಭ.

ತಜಕಿಸ್ತಾನದ ದುಶನ್‌ಬೆಯಲ್ಲಿ ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಶಾಂಘೈ ಸಹಕಾರ ಸಂಸ್ಥೆ – ಎಸ್‌ಸಿಒ ಸದಸ್ಯ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥರ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸಲಿದ್ದಾರೆ.ಸ್ವರಾಜ್ ಅವರು ನಿಗದಿತ ಮತ್ತು ವಿಸ್ತೃತ ಎರಡು ಬಗೆಯ ಮಾತುಕತೆಗಳಲ್ಲೂ ಭಾಗವಹಿಸಲಿದ್ದಾರೆ. ಸಿಎಚ್‌ಜಿ ಸಭೆಯಲ್ಲಿ ಭಾರತ, ಎಸ್‌ಸಿಒ ಸದಸ್ಯ ರಾಷ್ಟ್ರವಾಗಿ ಪಾಲ್ಗೊಳ್ಳಲಿದ್ದು, ಅದರೊಂದಿಗೆ ಆಫ್ಘಾನಿಸ್ತಾನ, ಬೆಲಾರೂಸ್, ಇರಾನ್ ಮತ್ತು ಮಂಗೋಲಿಯಾ ಭಾಗವಹಿಸಲಿವೆ.  ಎಸ್‌ಸಿಒ ಸಂಘಟನೆಯ ನೇತೃತ್ವವನ್ನು ಕಿರ್ಗಿಸ್ತಾನ್ ವಹಿಸಿಕೊಂಡ ನಂತರ ಮೊದಲ ಮಹತ್ವದ ಸಭೆ ಇದಾಗಿದೆ. ಸಭೆಯಲ್ಲಿ ಎಸ್‌ಸಿಒನ ಮುಂದಿನ ಬೆಳವಣಿಗೆಗಳು, ಪ್ರಸಕ್ತ ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು.