ಯುವ ಒಲಂಪಿಕ್ಸ್‌ನಲ್ಲಿ ೧೦ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಭ್ ಚೌಧರಿಗೆ ಚಿನ್ನದ ಪದಕ.

ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ ಪಂದ್ಯಾವಳಿಯ  ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಸೌರಭ್ ಚೌಧರಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ೧೬ ವರ್ಷದ ಸೌರಭ್ ತಮ್ಮ ಸಮೀಪದ ಎದುರಾಳಿಯನ್ನು ೭.೫ ಅಂಕಗಳಿಂದ  ಸೋಲಿಸಿದರು.  ಬ್ಯೂನಸ್ ಐರಿಸ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಇದುವರೆಗೆ ಮೂರು ಚಿನ್ನದ ಪದಕಗಳನ್ನು ಪಡೆದ ಭಾರತ  ಯುವ ಒಲಿಂಪಿಕ್ ಪಂದ್ಯಾವಳಿಯಲ್ಲಿ ಇತಿಹಾಸ ನಿರ್ಮಿಸಿದೆ.