ಮಾನವೀಯತೆಗಾಗಿ ಮಿಡಿಯುವ ಭಾರತ – ಅಭಿಯಾನ ಪ್ರಾರಂಭ

ಮಾನವೀಯತೆಗಾಗಿ ಭಾರತವು ರಾಷ್ಟ್ರದ ಪಿತಾಮಹ, ಮಹಾತ್ಮ ಗಾಂಧಿಯವರ 150 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು ಭಾರತದ ವಿದೇಶಾಂಗ ಸಚಿವಾಲಯವು ಪ್ರಾರಂಭಿಸಿದ ಒಂದು ಉದಾತ್ತ ಉಪಕ್ರಮವಾಗಿದೆ.

‘ಜೈಪುರ್ ಫೂಟ್’ ಟ್ರೇಡ್ ಮಾರ್ಕ್ ನಿಂದ ಚಿರಪರಿಚಿತವಾಗಿರುವ ‘ಭಗವಾನ್ ಮಹಾವೀರ್ ವಿಕ್ಲಾಂಗ್ ಸಹಾಯತ ಸಮಿತಿ’ಯ ಜೊತೆಗಿನ ಸಹಭಾಗಿತ್ವದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾನವೀಯತೆಗಾಗಿ ಭಾರತವನ್ನು ಪ್ರಾರಂಭಿಸಲು ಮತ್ತು ಈ ಅಭಿಯಾನವನ್ನು ಪ್ರಪಂಚದಾದ್ಯಂತದವರಿಗೆ ತಲುಪಲು ಇಡೀ ವರ್ಷದ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ದಪಡಿಸಿದೆ.

ಭಗವಾನ್ ಮಹಾವೀರ್ ವಿಕ್ಲಾಂಗ್ ಸಹಾಯಾತ ಸಮಿತಿಯು ಕೃತಕ ಅಂಗಗಳ ಜೋಡಣೆಯಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಸಂಸ್ಥೆಯಾಗಿದ್ದು, ಅದರ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಒದಗಿಸುತ್ತದೆ. ಅದರ ಪ್ರತಿರೂಪವಾದ ಜೈಪುರ್ ಫೂಟ್ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಕೃತಕ ಅಂಗಗಳ ಬೆಲೆಯ ಒಂದು ಭಾಗದಲ್ಲಿ ಕೃತಕ ಅಂಗಾಂಗಗಳನ್ನು ತಯಾರಿಸುತ್ತದೆ ಮತ್ತು ಈ ಅಂಗಾಂಗಳು ಎಲ್ಲದ್ದಕ್ಕಿಂತ ಹಗುರವಾಗಿದೆ. ವಾಸ್ತವವಾಗಿ, ಯುನೈಟೆಡ್ ನೇಷನ್ಸ್ ಕಳೆದ ಮೇ ತಿಂಗಳಲ್ಲಿ ನ್ಯೂಯಾರ್ಕ್‌ ನ ತನ್ನ ಪ್ರಧಾನ ಕಚೇರಿಯಲ್ಲಿ 50 ವರ್ಷಗಳ ಜೈಪುರ್ ಫೂಟ್‌ ಅನ್ನು ಸ್ಮರಿಸಿಕೊಳ್ಳಲು ವಿಶೇಷ ಸಮಾವೇಶ ಮತ್ತು ಪ್ರದರ್ಶನವನ್ನು ಏರ್ಪಡಿಸಿತು.

ಮಹಾತ್ಮ ಗಾಂಧಿಯವರು 1925 ರಲ್ಲಿ ತಮ್ಮ ವಾರ ಪತ್ರಿಕೆ ‘ಯಂಗ್ ಇಂಡಿಯಾ’ದಲ್ಲಿ ಏಳು ಪಾಪಗಳ ಪೈಕಿ ಒಂದು “ಮಾನವೀಯತೆ ಇಲ್ಲದ ವಿಜ್ಞಾನ” ಎಂದು ಹೇಳಿದ್ದಾರೆ. ಭಗವಾನ್ ಮಹಾವೀರ್ ವಿಕ್ಲಾಂಗ್ ಸಹಾಯಾತ ಸಮಿತಿಯು ವಿಜ್ಞಾನವನ್ನು ಮಾನವೀಯತೆಯೊಂದಿಗೆ ಸಂಯೋಜಿಸಿದಾಗ ಅದು ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂದು ಜಗತ್ತಿಗೆ ಸಾಬೀತು ಪಡಿಸಿದೆ. ಗಾಂಧಿಯವರ ಜೀವನವು ಎಲ್ಲರಿಗೂ ಸ್ಫೂರ್ತಿಯಾಗಿದ್ದು, ವಸಾಹತುಶಾಹಿ, ಗುಲಾಮಗಿರಿ, ಬಡತನ, ತಾರತಮ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನವ ವಿಫಲತೆಗಳಿಂದ ಸ್ವಾತಂತ್ರ್ಯಕ್ಕಾಗಿ ತನ್ನ ಹೋರಾಟದಲ್ಲಿ ಜಗತ್ತನ್ನು ಮುನ್ನಡೆಸಿದೆ.

ದೇಶಗಳ ನಡುವಿನ ಉತ್ತಮ ಸಂಬಂಧವನ್ನು ಬೆಳೆಸುವುದು ಮಾತ್ರ ವಿದೇಶಿ ನೀತಿ ಅಲ್ಲ. ಒಂದು ದೇಶವು ಇತರರೊಂದಿಗೆ ಏನನ್ನು ಹಂಚಿಕೊಳ್ಳುತ್ತದೆ ಎಂಬುದು ಕೂಡ ಇಲ್ಲಿ ಮುಖ್ಯ. ಭಾರತವು ತಮ್ಮ ಜೀವನದಲ್ಲಿ ಒಂದು ಬದಲಾವಣೆ ತರಬಲ್ಲುದೇ ಎಂದು ಇತರ ದೇಶಗಳಲ್ಲಿರುವ ಜನರನ್ನು ತಲುಪುವುದು ಕೂಡ ವಿದೇಶ ನೀತಿಯಾಗಿದೆ. ಇದು ಜನರ ಜೀವನವನ್ನು ಸಶಕ್ತೀಕರಣಗೊಳಿಸುತ್ತದೆ.

ಪ್ರಪಂಚದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಎಲ್ಲರೂ ಒಟ್ಟಾಗಿ ಬರಬೇಕು. ಪ್ರತಿ ನೀತಿಯ ಹಿಂದೆ, ಪ್ರತಿ‌ ಹೆಜ್ಜೆಯ ಹಿಂದೆ ಮತ್ತು ಪ್ರತಿಯೊಂದು ಯೋಜನೆಯ ಹಿಂದೆ ಸಮಾಜದ‌ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ಆಗಬೇಕು ಎಂಬ ಕಳಕಳಿ ಇರುವುದು ಅತಿಮುಖ್ಯ.

ಪ್ರಸ್ತುತ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ, ಭಾರತ ಮತ್ತು ವಿದೇಶಗಳಲ್ಲಿನ ಭಾರತೀಯರನ್ನು ತಲುಪುವ ಮೂಲಕ ವಿದೇಶಿ ನೀತಿಯಲ್ಲಿ ಕಾಳಜಿಯುಳ್ಳ, ವೈಯಕ್ತಿಕ ಸ್ಪರ್ಶ ಮತ್ತು ಸಹಾನುಭೂತಿಯ ಒಂದು ಅರ್ಥವನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿದೆ. ಅದರಲ್ಲೂ ವಿಶೇಷವಾಗಿ ಈ ಹಿಂದೆ ತಲುಪಲು ಕಷ್ಟವಾಗಿದ್ದ ವ್ಯಕ್ತಿಗಳನ್ನು ಕೂಡ ಭಾರತ ಸರ್ಕಾರ ಈಗ ತಲುಪುತ್ತಿದೆ. ವಿದೇಶದಲ್ಲಿ ಗಂಡ ತೊರೆದ ಒಬ್ಬ ಭಾರತೀಯ ಮಹಿಳೆಯಾಗಲಿ ಅಥವಾ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ವಿದೇಶಿಯರು ತುರ್ತಾಗಿ ವೀಸಾ ಅಗತ್ಯವಿರಲಿ ಅಥವಾ ಭಾರತೀಯ ಒಬ್ಬನಿಗೆ ತನ್ನ ಪಾಸ್ಪೋರ್ಟ್ ತಕ್ಷಣವೇ ನವೀಕರಿಸಬೇಕು ಎಂದು ಅರಿವಾದ ಸಂದರ್ಭದಲ್ಲಿಯೇ ಆಗಲಿ ಭಾರತ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿದೆ‌.

ಮಾನವೀಯ ಅಭಿಯಾನದ ಭಾರತವನ್ನು ಉದ್ಘಾಟಿಸಿ ವಿದೇಶಾಂಗ ಸಚಿವ ಶ್ರೀಮತಿ ಸುಷ್ಮಾ ಸ್ವರಾಜ್ “ಇದು ಮಹಾನ್ ಭಾರತೀಯ ತತ್ವಜ್ಞಾನಿ ಮತ್ತು ಚಿಂತಕ ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ಉದ್ಧರಿಸಿ, ಮಾನವೀಯತೆಯು ತನ್ನ ಉದಾತ್ತತೆಯನ್ನು ಸಾಧಿಸಿರುವ ಭೂಮಿಯಿದು, ಔದಾರ್ಯ, ಶುದ್ಧತೆ, ಶಾಂತತೆಗೆ ಬದ್ಧ ದೇಶ ಭಾರತ” ಎಂದು ಹೇಳಿದ್ದಾರೆ, ಮಹಾತ್ಮ ಗಾಂಧಿಯವರು ಮಾನವ ಜೀವನದ ಸೇವೆಗಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದಾರೆ ಎಂದು ಭಾರತೀಯ ಸಚಿವರು ತಿಳಿಸಿದ್ದಾರೆ. ಗಾಂಧೀಜಿಯವರ ಜೀವನದಲ್ಲಿ ಪ್ರಾಬಲ್ಯ ಹೊಂದಿದ್ದ ಮಾನವೀಯತೆಯ ಈ ಸೇವೆ ಮತ್ತು ಅವರ ಜೀವನದಲ್ಲಿ ವಿಭಿನ್ನ ಕಾರಣಗಳನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಿತು – ಅವರ ರಾಜಕೀಯ ಸ್ವಾತಂತ್ರ್ಯವು ಅವುಗಳಲ್ಲಿ ಒಂದಾಗಿದೆ.

ಬಿಕ್ಕಟ್ಟಿನ ಸ್ಥಳಗಳಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ನಿರಂತರ ಪ್ರಯತ್ನ ನಡೆಸಿದೆ ಹಾಗೆಯೇ ಈ ಪ್ರಯತ್ನವನ್ನು ಸರಕಾರ ಕೇವಲ ಭಾರತೀಯ ಜನರಿಗೆ ಮಾತ್ರ ಸೀಮಿತಗೊಳಿಸದೇ ಎಲ್ಲಾ ರಾಷ್ಟ್ರಗಳ ಜನರಿಗೆ ಸಹಾಯ ಮಾಡಲು ನಮ್ಮ ಕೈಗಳನ್ನು ವಿಸ್ತರಿಸಿದೆ ಎಂದು ಶ್ರೀಮತಿ‌ ಸ್ವರಾಜ್ ಹೇಳಿದ್ದಾರೆ.

ಮಾನವೀಯತೆಯ ಭಾರತವು ಅಂತಹ ನೆರವು ಅಗತ್ಯವಿರುವ ಸಾವಿರಾರು ಜನರ ಜೀವನವನ್ನು ಮುಟ್ಟುತ್ತದೆ ಮತ್ತು ಹಲವಾರು ದೇಶಗಳನ್ನು ಒಂದು ವರ್ಷದಲ್ಲಿ ವ್ಯಾಪಿಸಲಿದೆ. ಈ ಶಿಬಿರಗಳನ್ನು ಆರಂಭದಲ್ಲಿ ಸರ್ಕಾರದ ಆರ್ಥಿಕ ಬೆಂಬಲದೊಂದಿಗೆ ಭಾರತೀಯ ಮಿಶನ್ ಗಳ ಮೂಲಕ ಗುರುತಿಸಲಾದ 12 ದೇಶಗಳಲ್ಲಿ ನಡೆಯಲಿದೆ. ತಮ್ಮ ಗುರಿ ಮತ್ತು ಆತ್ಮೀಯತೆ ಮತ್ತು ಉತ್ಪಾದಕ ಸದಸ್ಯರಾಗಲು ಘನತೆಯನ್ನು ಮರಳಿ ಪಡೆಯಲು ಸಹಾಯ ಮಾಡುವ ಮೂಲಕ ಪ್ರಪಂಚದಾದ್ಯಂತ ವಿಭಿನ್ನವಾಗಿ-ಶಕ್ತಿಯನ್ನು ಹೊಂದುವ ಭೌತಿಕ, ಆರ್ಥಿಕ ಮತ್ತು ಸಾಮಾಜಿಕ ಪುನರ್ವಸತಿಗಾಗಿ ಒದಗಿಸುವುದು ದೊಡ್ಡ ಗುರಿಯಾಗಿದೆ. ಮಾನವೀಯತೆಗಾಗಿ ಭಾರತ ಭವಿಷ್ಯದ ಭರವಸೆ ನೀಡುತ್ತದೆ.

ಬರಹ: ದೀಪಾಂಜನ್ ರಾಯ್ ಚೌಧುರಿ, ರಾಜತಾಂತ್ರಿಕ ವರದಿಗಾರ